ಹೊಸದಿಗಂತ ಡಿಜಿಟಲ್ ಡೆಸ್ಕ್
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಶಾಸಕ ಸಿ.ಟಿ ರವಿ ಅವಹೇಳನಕಾರಿ ಪದ ಬಳಕೆ ಆರೋಪದ ಕೇಸ್ ಸಿಐಡಿಗೆ ನೀಡಲಾಗಿದೆ. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ವೇಳೆ ರಾಜ್ಯಪಾಲರಿಗೆ ಸಿಟಿ ರವಿ ದೂರು ಕೊಟ್ಟಿರೋ ವಿಚಾರಚಾಗಿ ಪ್ರತಿಕ್ರಿಯಿಸಿದರು. ಸಿ.ಟಿ ರವಿ ರಾಜ್ಯಪಾಲರಿಗೆ ದೂರು ಕೊಡಲಿ. ಆ ಕೇಸನ್ನು ಸಿಐಡಿಗೆ ಕೊಟ್ಟಿದ್ದೇವೆ. ಸಿ.ಟಿ ರವಿ ಅವಾಚ್ಯ ಪದ ಬಳಕೆ ಮಾಡಿದ್ದಾರಾ? ಇಲ್ಲವಾ? ಎಂಬುದು FSL ವರದಿ ಬರಲಿ, ಆಗ ಸತ್ಯಾಸತ್ಯತೆ ತಿಳಿಯಲಿದೆ ಎಂದಿದ್ದಾರೆ.
ಮಹಿಳೆಗೆ ಅವಮಾನ ಆಗೋ ರೀತಿ ಮಾತಾಡಿದ್ದಾರೆ ಅನ್ನೋದು ಆರೋಪ. ಆರೋಪದ ಆಧಾರದಲ್ಲಿ ಸಿಟಿ ರವಿ ಮೇಲೆ FIR ದಾಖಲಾಗಿದೆ. ಸಿಐಡಿ ತನಿಖೆಗೆ ಆದೇಶ ಮಾಡಲಾಗಿದೆ ವರದಿ ಬರಲಿ ನೋಡೋಣ ಎಂದಿದ್ದಾರೆ.