ಹಿಂದು ವಿರೋಧಿ ಕೃತ್ಯಗಳ ವಿರುದ್ಧ ಕ್ರಮ: ಬ್ರಿಟನ್‌ ಸಂಸತ್ತಿನಲ್ಲಿ ನಿರ್ಣಯಕ್ಕೆ ಸರ್ವಾನುಮತದ ಸಮ್ಮತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯುಕೆ ಸಂಸತ್ತಿನಲ್ಲಿ ಹಿಂದು ವಿರೋಧಿ ಕೃತ್ಯಗಳ ವಿರುದ್ಧ ಮೆಟ್ರೊಪಾಲಿಟನ್‌ ಪೊಲೀಸರು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಬ್ರಿಟನ್‌ ಸಂಸದ ಕೃಪೇಶ್‌ ಹಿರಾನಿ ಅವರು ಮಂಡಿಸಿದ ನಿರ್ಣಯಕ್ಕೆ ಸರ್ವಾನುಮತದ ಒಪ್ಪಿಗೆ ದೊರೆತಿದೆ.

ಸ್ಥಳೀಯ ಹಿಂದು ಸಮುದಾಯದವರಲ್ಲಿ ವಿಶ್ವಾಸ ಮೂಡಿಸಿ, ಅವರ ಸಹಕಾರದೊಂದಿಗೆ ಇಂತಹ ಕೃತ್ಯಗಳನ್ನು ತಡೆಗಟ್ಟಬೇಕು ಎಂದು ನಿರ್ಣಯದಲ್ಲಿ ಹೇಳಲಾಗಿದೆ.

‘ಹಿಂದೂಫೋಬಿಯಾ’ ಮತ್ತು ಲಂಡನ್‌ ಜನರ ಮೇಲೆ ಅದು ಬೀರುತ್ತಿರುವ ಪರಿಣಾಮದ ಬಗ್ಗೆ ವಿವರಿಸಿದರು.’ಲಂಡನ್‌ ಅಥವಾ ಅದರಾಚೆಗೆ ಹಿಂದೂಫೋಬಿಯಾಗೆ ಜಾಗ ಇಲ್ಲ. ದುರದೃಷ್ಟವಶಾತ್‌ ಕಳೆದ ಕೆಲ ವರ್ಷಗಳಿಂದ ನಮ್ಮ ಸಮುದಾಯದ ವಿರುದ್ಧ ದ್ವೇಷದ ಕೃತ್ಯಗಳು ಹೆಚ್ಚಾಗಿವೆ’ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!