ಮಂತ್ರಾಲಯಕ್ಕೆ ಆಗಮಿಸುವ ಎಲ್ಲ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಕ್ರಮ: ಸುಬುಧೇಂದ್ರ ಸ್ವಾಮೀಜಿ

ಹೊಸದಿಗಂತ ವರದಿ,ರಾಯಚೂರು :

ಮಂತ್ರಾಲಯದಲ್ಲಿ ಸೋಮವಾರ ರಾತ್ರಿ ಸುರಿದ ಅಧಿಕ ಮಳೆಯಿಂದಾಗಿ ಭಕ್ತರಿಗೆ ಅನಾನುಕೂಲ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸುವ ಕಾರ್ಯವನ್ನು ಶ್ರೀಮಠ ಮಾಡಲಿದೆ ಎಂದು ಮಂತ್ರಾಲಯದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಮಂಗಳವಾರ ಶ್ರೀಮಠದ ಪ್ರಾಧಿಕಾರದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅನುಗ್ರಹ ಸಂದೇಶ ನೀಡಿ, ಗುರುಸಾರ್ವಭೌಮರ ಆರಾಧನಾ ಮಹೋತ್ಸವಕ್ಕೆ ದೇಶದ ಮೂಲೆ ಮೂಲೆಗಳಿಂದ ಹಾಗೂ ವಿದೇಶದಿಂದಲೂ ಅಸಂಖ್ಯಾತ ಭಕ್ತರು ಆಗಮಿಸುತ್ತಿದ್ದು ಇವರೆಲ್ಲರಿಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದಕ್ಕೆ ಇನ್ನು ಹೆಚ್ಚಿನ ಆದ್ಯತೆಯನ್ನು ನೀಡಲಾಗುವುದು ಎಂದು ಹೇಳಿದರು.

ವಿವಿಧ ತೀರ್ಥ ಕ್ಷೇತ್ರಗಳಿಂದ ಪ್ರಸಾದ ರೂಪದಲ್ಲಿ ಶ್ರೀಗುರುರಾಯರ ಶೇಷವಸ್ಟ್ರಗಳು ಬರುತ್ತಿದ್ದು, ಟಿಟಿಡಿಯಿಂದ ಶ್ರೀನಿವಾಸ ದೇವರ ಶೇಷವಸ್ತ್ರವನ್ನು ಅತ್ಯಂತ ಗೌರವಪೂರ್ವಕವಾಗಿ ಸ್ವೀಕರಿಸಲಾಗಿದೆ. ಇದೀಗ ದೇಶದ ಸ್ವಯಂವ್ಯಕ್ತ ಎಂಟು ಕ್ಷೇತ್ರಗಳಲ್ಲೊಂದಾದ ಶ್ರೀರಂಗoನ ರಂಗನಾಥ ಸನ್ನಿಧಾನದಿಂದ ಬಂದಿರುವ ಶೇಷವಸ್ತ್ರ ಹಾಗೂ ಗಂಗಾಪ್ರಸಾದವನ್ನು ಸಹ ಗೌರವಪೂರ್ವಕವಾಗಿ ಸ್ವಾಗತಿಸಲಾಗಿದೆ ಎಂದು ವಿವರಿಸಿದರು.

ಹಿಂದಿನಿoದಲೂ ಶ್ರೀರಾಯರ ಮಠ ಹಾಗೂ ಶ್ರೀರಂಗo ರಂಗನಾಥ ಸ್ವಾಮಿಗಳ ದೇವಸ್ಥಾನಕ್ಕೆ ಅವಿನಾಭಾವ ಬಾಂಧವ್ಯವನ್ನು ಹೊಂದಿದ್ದು, ರಾಯರು-ಪೂರ್ವದ ಪೀಠಾಧಿಪತಿಗಳು, ಶ್ರೀರಂಗoನ ರಂಗನಾಥ ಸ್ವಾಮಿ ದೇವಸ್ಥಾನದೊಂದಿಗೆ ಉತ್ತಮ ಸಂಬoಧವನ್ನು ಬೆಳೆಸಿಕೊಂಡು ಬಂದಿದ್ದಾರೆ ಎಂದು ತಿಳಿಸಿದರು.

ಶ್ರೀರಂಗo ರಂಗನಾಥ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ಸುಂದರ ಭಟ್ಟಾಚಾರ್ಯ, ಶ್ರೀಮಠದ ಪಂಡಿತ ರಾಜಾ ಎಸ್.ಗಿರಿಯಾಚಾರ್, ವ್ಯವಸ್ಥಾಪಕರಾದ ಎಸ್.ಕೆ. ಶ್ರೀನಿವಾಸರಾವ್, ವೆಂಕಟೇಶ ಜೋಶಿ, ನಿವೃತ್ತ ಪ್ರಾಚಾರ್ಯ ಎನ್.ವಾದಿರಾಜಾಚಾರ್ ಹಾಗೂ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಅಪಾರ ಭಕ್ತರು ಪಾಲ್ಗೊಂಡಿದ್ದರು.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!