VIDEO | ಶೂಟಿಂಗ್‌ ವೇಳೆ ನಟ ಅಜಿತ್‌ ಕಾರು ಪಲ್ಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಶೂಟಿಂಗ್‌ ವೇಳೆ ಟಾಲಿವುಡ್​ ನಟ ಅಜಿತ್​ ಕಾರು ಪಲ್ಟಿ ಹೊಡೆದಿದೆ. ಡ್ರಿಫ್ಟ್‌ ಮಾಡುವ ಸೀನ್‌ ಶೂಟ್‌ ವೇಳೆ ಕಾರು ಪಲ್ಟಿಯಾಗಿದ್ದು, ಈ ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅಜಿತ್​ ಕುಮಾರ್​ ವಿಡೈಮುಯರ್ಚಿ’ಚಿತ್ರೀಕರಣದ ಸಮಯದಲ್ಲಿ ಈ ಘಟನೆ ನಡೆದಿದೆ. ಅಂದಹಾಗೆಯೇ ಇದು ಕಳೆದ ವರ್ಷ ಶೂಟಿಂಗ್​ ಸಮಯದಲ್ಲಿ ನಡೆದ ಘಟನೆ ಎನ್ನಲಾಗುತ್ತಿದೆ. ಸದ್ಯ ಮಧ್ಯಪ್ರದೇಶದಲ್ಲಿ ಪ್ರವಾಸದಲ್ಲಿರುವ ನಟ, ಕಳೆದ ವರ್ಷ ಕಾರು ಸ್ಟಂಟ್​ ಮಾಡುವಾಗ ಅವರು ಚಲಾಯಿಸುತ್ತಿದ್ದ ಕಾರು ಪಲ್ಟಿ ಹೊಡೆದಿತ್ತು.

ಅಜಿತ್​ ಯುರೋಪಿನ್ ದೇಶದಲ್ಲಿ ಸ್ಟಂಟ್​ ಮಾಡುವಾಗ ಕಾರು ಮಗುಚಿ ಬಿದ್ದಿದೆ. ಡ್ಯೂಪ್ ಇಲ್ಲದೇ ನಟ ಕಾರು ಚಲಾಯಿಸುವ ಮತ್ತು ಸಾಹಸ ಮಾಡುವ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!