ವಕೀಲರ ಜೊತೆಗೆ ಪೊಲೀಸರ ವಿಚಾರಣೆಗೆ ನಟ ಅಲ್ಲು ಅರ್ಜುನ್‌ ಹಾಜರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಕೀಲರ ಜೊತೆಗೆ ಪೊಲೀಸರ ವಿಚಾರಣೆಗೆ ನಟ ಅಲ್ಲು ಅರ್ಜುನ್‌ ಹಾಜರಾಗಿದ್ದಾರೆ.

ಸಂಧ್ಯಾ ಚಿತ್ರಮಂದಿರ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಗೆ ನಿನ್ನೆಯಷ್ಟೆ ಚಿಕ್ಕಡಪಲ್ಲಿ ಪೊಲೀಸರು ಮತ್ತೊಮ್ಮೆ ನೊಟೀಸ್ ನೀಡಿದ್ದರು. ಕಳೆದ ವಾರವಷ್ಟೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಲ್ಲು ಅರ್ಜುನ್ ಅನ್ನು ಬಂಧಿಸಿದ್ದರು, ಒಂದು ರಾತ್ರಿ ಜೈಲಿನಲ್ಲಿ ಕಳೆದಿದ್ದ ಅಲ್ಲು ಅರ್ಜುನ್ ಮರು ದಿನವೇ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದರು. ಬಳಿಕ ನಿನ್ನೆ ಪೊಲೀಸರು ಮತ್ತೊಮ್ಮೆ ನೊಟೀಸ್ ನೀಡಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.

ಅದರಂತೆ ಅಲ್ಲು ಅರ್ಜುನ್ ಇಂದು (ಡಿಸೆಂಬರ್ 24) ಬೆಳಿಗ್ಗೆ ಚಿಕ್ಕಡಪಲ್ಲಿ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದಾರೆ. ಮನೆಯಿಂದ ವಿಚಾರಣೆಗೆ ತೆರಳುವ ಮುನ್ನ ಮನೆ ಮುಂದೆ ನೆರೆದಿದ್ದ ಅಭಿಮಾನಿಗಳಿಗೆ ಕೈ ಬೀಸಿ, ಪತ್ನಿ ಹಾಗೂ ಮಕ್ಕಳನ್ನು ತಬ್ಬಿಕೊಂಡು, ಹಾಜರಿದ್ದ ತಂದೆ ಅಲ್ಲು ಅರವಿಂದ್ ಹಾಗೂ ಮಾವ ಚಂದ್ರಶೇಖರ ರೆಡ್ಡಿ ಅವರಿಗೆ ಕೈ ಕುಲುಕಿ ವಿಚಾರಣೆಗೆ ತೆರಳಿದರು. ಆದರೆ ಈ ಬಾರಿ ವಕೀಲರ ಸಮ್ಮುಖದಲ್ಲಿ ಅಲ್ಲು ಅರ್ಜುನ್ ಅವರನ್ನು ಪೊಲೀಸರು ವಿಚಾರಣೆ ನಡೆಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!