ನಟ ಅಲ್ಲು ಅರ್ಜುನ್‌ ಬಂಧನ, ಬಿಡುಗಡೆ: ರಶ್ಮಿಕಾ ಮಂದಣ್ಣ ಕೊಟ್ರು ರಿಯಾಕ್ಷನ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ನಟ ಅಲ್ಲು ಅರ್ಜುನ್‌ಗೆ ತೆಲಂಗಾಣ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಈ ಬೆನ್ನಲ್ಲೇ ‘ಪುಷ್ಪ 2’ ನಟಿ ರಶ್ಮಿಕಾ ಮಂದಣ್ಣ ರಿಯಾಕ್ಟ್ ಮಾಡಿದ್ದಾರೆ.

ಈ ಪರಿಸ್ಥಿತಿಯು ನಂಬಲಾಗದ ಆಘಾತವುಂಟು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾನು ಏನು ನೋಡಿದೆನೋ ಅದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಈ ಘಟನೆ ನಡೆದಿದ್ದು, ನಿರೀಕ್ಷಿತವಾಗಿ. ಇದರ ಬಗ್ಗೆ ಬೇಸರವಿದೆ. ನಟ ಅನ್ನೋ ಒಂದೇ ಒಂದು ಕಾರಣಕ್ಕೆ ಆರೋಪ ಹೊರಿಸುವುದನ್ನು ನೋಡಿದರೆ ಬೇಸರವಾಗುತ್ತದೆ. ಈ ಪರಿಸ್ಥಿತಿಯು ನಂಬಲಾಗದ ಆಘಾತವುಂಟು ಮಾಡಿದೆ ಎಂದು ರಶ್ಮಿಕಾ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!