ರಾಮನೂರಿನಲ್ಲೇ ಮನೆ ಮಾಡಲು ಮುಂದಾದ ನಟ ಅಮಿತಾಭ್ ಬಚ್ಚನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆಯಲ್ಲಿ ರಾಮ ಮಂದಿರದ (Ayodhya RamMandir) ‘ಪ್ರಾಣ ಪ್ರತಿಷ್ಠಾ’ ಸಂಭ್ರಮ ಮನೆ ಮಾಡಿದ್ದು , ಇದರ ನಡುವೆ ಬಾಲಿವುಡ್ (Bollywood) ಖ್ಯಾತ ನಟ ಅಮಿತಾಭ್ ಬಚ್ಚನ್ (Amitabh Bachchan) ಅಯೋಧ್ಯೆಯಲ್ಲಿ (Ayodhya) ಮನೆ ಹೊಂದಲು ನಿರ್ಧರಿಸಿದ್ದಾರೆ.

ಅಯೋಧ್ಯೆಯಲ್ಲಿ ನಿವೇಶನ ಖರೀದಿ ಮಾಡಿದ್ದಾರೆ. ಮುಂಬೈ ಮೂಲದ ಡೆವಲಪರ್‍ ಕಂಪೆನಿಯಿಂದ ಈ ನಿವೇಶನ ಖರೀದಿ ಮಾಡಿದ್ದು, ನಿವೇಶನದ ಮೌಲ್ಯ 14.5 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ.

ಮೊನ್ನೆಯಷ್ಟೇ ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮಮಂದಿರ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆ ಪಡೆದ್ದ ಅಮಿತಾಭ್, ಇದೀಗ ರಾಮನೂರಿನಲ್ಲೇ ಮನೆ ಮಾಡಲು ನಿರ್ಧಾರ ಮಾಡಿದ್ದು, ಸಹಜವಾಗಿಯೇ ಅಭಿಮಾನಿಗಳಿಗೆ ಸಂಭ್ರಮ ತಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!