ಪ್ರಧಾನಿ ಮೋದಿ ಭೇಟಿಯಾಗಿ ರುದ್ರಾಕ್ಷಿ ಹಾರ ನೀಡಿದ ನಟ ಅನುಪಮ್ ಖೇರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಬಾಲಿವುಡ್​ನ ಹಿರಿಯ ನಟ ಅನುಪಮ್ ಖೇರ್​ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ರುದ್ರಾಕ್ಷಿ ಹಾರವನ್ನು ನೀಡಿದ್ದಾರೆ.
ಈ ರುದ್ರಾಕ್ಷಿ ಹಾರವನ್ನುವಿಶೇಷತೆ ಏನೆಂದರೆ, ಇದನ್ನು ಅನುಪಮ್ ಖೇರ್ ಅವರ​ ತಾಯಿ ಪ್ರಧಾನಿ ಮೋದಿಯವರಿಗಾಗಿ ಕಳಿಸಿಕೊಟ್ಟಿದ್ದಾರೆ.
ಅನುಪಮ್​ ಖೇರ್​ ಪ್ರಧಾನಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದ ಫೋಟೋವನ್ನು ಟ್ವೀಟ್​ ಹಂಚಿಕೊಂಡಿದ್ದು, ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ತುಂಬ ಸಂತೋಷವಾಯಿತು. ಈ ದೇಶಕ್ಕಾಗಿ, ದೇಶದ ಜನರಿಗಾಗಿ ನೀವು ಹಗಲಿರುಳು ಶ್ರಮಿಸುತ್ತಿದ್ದೀರಿ. ನಿಮ್ಮ ರಕ್ಷಣೆಗೆ ಇರಲಿ ಎಂದು ನನ್ನ ತಾಯಿ ಈ ರುದ್ರಾಕ್ಷಿ ಹಾರವನ್ನು ಕಳಿಸಿಕೊಟ್ಟಿದ್ದರು. ಅದನ್ನು ನೀವು ಸ್ವೀಕರಿಸಿದ ಕ್ಷಣವನ್ನು ಎಂದಿಗೂ ಮರೆಯುವುದಿಲ್ಲ. ಜೈ ಹೋ, ಜೈ ಹಿಂದ್​ ಎಂದು ಬರೆದಿದ್ದಾರೆ.

ಅನುಪಮ್ ಖೇರ್​ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿದ ಪ್ರಧಾನಮಂತ್ರಿ ಮೋದಿ, ಧನ್ಯವಾದಗಳು ಅನುಪಮ್​ ಖೇರ್​. ನನಗೆ ಮಾತಾಜಿಯವರ ಆಶೀರ್ವಾದ ಸಿಕ್ಕಂತಾಯಿತು. ಈ ದೇಶಕ್ಕೆ ನಿರಂತರವಾಗಿ ಸೇವೆ ಸಲ್ಲಿಸಲು ಶಕ್ತಿ, ಸ್ಫೂರ್ತಿ ನೀಡುತ್ತಿರುವುದೇ ಈ ದೇಶದ ಜನರು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!