ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಇರುವ ನಟ ದರ್ಶನ್ ಪ್ರಿಸನ್ ಕಾಲ್ ಸಿಸ್ಟಮ್ ಅಡಿ ಲ್ಯಾಂಡ್‌ಲೈನ್ ಮೂಲಕ ಪತ್ನಿ ವಿಜಯಲಕ್ಷ್ಮಿ ಜೊತೆ ಮಾತನಾಡಿದ್ದಾರೆ.
ಪ್ರಿಸನ್ ಕಾಲ್ ಸಿಸ್ಟಮ್ ಅಡಿಯಲ್ಲಿ ಪತ್ನಿ ಜೊತೆ ಇಂದು 2:30ಕ್ಕೆ ದರ್ಶನ ಮಾತನಾಡಿದ್ದಾರೆ. ಫೋನ್ನಲ್ಲಿ ಚಾರ್ಜ್ಶೀಟ್ ಕುರಿತಂತೆ ದರ್ಶನ್ ಮಾಹಿತಿ ಪಡೆದುಕೊಂಡಿದ್ದಾರೆ.
ಇನ್ನು ಇದೇ ವೇಳೆ ವಿಜಯಲಕ್ಷ್ಮಿಯವರು ದರ್ಶನ್ ಆರೋಗ್ಯವನ್ನು ವಿಚಾರಣೆ ಮಾಡಿದ್ದಾರೆ. ಪತಿ-ಪತ್ನಿ ಇಬ್ಬರು 5 ನಿಮಿಷ ಕಾಲ ಮಾತನಾಡಿದ್ದಾರೆ. ಈ ಇಬ್ಬರು ಮಾತನಾಡಿದ್ದ ಪೋನ್ ಸಂಭಾಷಣೆಯನ್ನು ಜೈಲು ಅಧಿಕಾರಿಗಳು ರೆಕಾರ್ಡ್ ಮಾಡಿಕೊಂಡಿದ್ದಾರೆ. ದರ್ಶನ್ ಕೇಳಿದ ಮೇಲೆ ಸುಮಾರು 3 ಗಂಟೆ ತಡವಗಿ ಫೋನ್ ಮಾಡಲು ಅಧಿಕಾರಿಗಳು ಅನುಮತಿ ಕೊಟ್ಟಿದ್ದಾರೆ.