ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಈ ಪ್ರಕರಣದ ವಿಚಾರವಾಗಿ ದರ್ಶನ್ ಅವರ ಮೊದಲ ಪತ್ನಿ ವಿಜಯಲಕ್ಷ್ಮೀ ಕೂಡ ಈವರೆಗೂ ಯಾವುದೇ ಕಾಮೆಂಟ್ ಮಾಡಿಲ್ಲ. ಆದರೆ, ತಮ್ಮ ಸೋಶಿಯಲ್ ಅಕೌಂಟ್‌ನಲ್ಲಿ ದರ್ಶನ್ ಜೊತೆಗಿದ್ದ ಫೋಟೋವನ್ನು ಅವರು ಡಿಲೀಟ್ ಮಾಡಿದ್ದಾರೆ.
ಇದರ ನಡುವೆ ದರ್ಶನ್ ಹಾಗೂ ವಿಜಯಲಕ್ಷ್ಮೀ ಅವರ ಪುತ್ರ 15 ವರ್ಷದ ವಿನೇಶ್ ಸೋಶಿಯಲ್ ಮೀಡಿಯಾದಲ್ಲಿ ಮಾಡಿರುವ ಪೋಸ್ಟ್ ಗಮನಸೆಳೆದಿದೆ. ಅವರಿಗೆ ಬರುತ್ತಿರುವ ಸೋಶಿಯಲ್ ಮೀಡಿಯಾ ಒತ್ತಡ ಹಾಗೂ ಕೆಟ್ಟ ಕಾಮೆಂಟ್‌ಗಳ ಬಗ್ಗೆ ಅವರು ಬರೆದುಕೊಂಡಿದ್ದಾರೆ.
ಅಪ್ಪ ದರ್ಶನ್ ಅರೆಸ್ಟ್‌ಗೆ ವಿನೀಶ್ ಇನ್ಸ್‌ಟಾಗ್ರಾಮ್ ಸ್ಟೋರಿ ಹಂಚಿಕೊಂಡಿದ್ದಾರೆ.’ ನನ್ನ ತಂದೆ ಬಗ್ಗೆ ಕೆಟ್ಟ ಕಾಮೆಂಟ್ಸ್ ಮತ್ತು ಅಸಭ್ಯ ಭಾಷೆಯಲ್ಲಿ ನಿಂದನೆ ಮಾಡುತ್ತಿರುವರಿಗೆ ಧನ್ಯವಾದಗಳು. ನನಗೆ 15 ವರ್ಷ, ನನಗೂ ಮನಸಿದೆ, ಈ ಕಷ್ಟದ ಸಮಯದಲ್ಲಿ ನನ್ನ ತಾಯಿ ಮತ್ತು ತಂದೆಗೆ ನಿಮ್ಮ ಬೆಂಬಲದ ಅಗತ್ಯವಿದೆ. ನನಗೆ ಶಾಪ ಹಾಕಿದ್ರೆ ಯಾವ ಬದಲಾವಣೆಯೂ ಆಗೋದಿಲ್ಲ’ ಎಂದು ವಿನೇಶ್ ಬರೆದುಕೊಂಡಿದ್ದಾರೆ. ಎಲ್ಲರಿಗೂ ಥ್ಯಾಂಕ್ಸ್ ಎಂದು ಕೆಳಗೆ ಇಮೋಜಿಯನ್ನೂ ಕೂಡ ಹಂಚಿಕೊಂಡಿದ್ದಾರೆ.