ರಾತ್ರಿಯಿಡೀ ಪೊಲೀಸ್‌ ಲಾಕಪ್‌ನಲ್ಲಿ ನಟ ದರ್ಶನ್‌, ಮಹಿಳಾ ಸಾಂತ್ವನ ಕೇಂದ್ರದಲ್ಲಿ ಪವಿತ್ರಾ ಗೌಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಚಾಲೆಂಜಿಂಗ್ ಸ್ಟಾರ್ ದರ್ಶನ್  ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ  ಅರೆಸ್ಟ್ ಆಗಿದ್ದಾರೆ.

ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಯ ಲಾಕಪ್​ನಲ್ಲಿ ದರ್ಶನ್ ಹಾಗೂ ಸಹಚರರು ಇದ್ದಾರೆ. ರಾತ್ರಿ ದರ್ಶನ್​ ಅವರಿಗೆ ಹೋಟೆಲ್​ನಿಂದ ದೊನ್ನೆ ಬಿರಿಯಾನಿ ತರಿಸಲಾಗಿದೆ. ಆದರೆ ಬೇಸರದಲ್ಲಿಯೇ ಇದ್ದ ದರ್ಶನ್ ಬಿರಿಯಾನಿ ತಿನ್ನದೆ ಒಂದು ಗ್ಲಾಸ್ ಮಜ್ಜಿಗೆ ಕುಡಿದು, ಬಿಸ್ಕೆಟ್ ಮತ್ತು ಪೊಲೀಸರು ಕೊಟ್ಟ ಚಾಕಲೇಟ್ ತಿಂದು ರಾತ್ರಿಯೆಲ್ಲ ನಿದ್ದೆಯಿಲ್ಲದೆ ಕಳೆದಿದ್ದಾರೆ. ಲಾಕಪ್​ನಲ್ಲಿ ಎಚ್ಚರಗೊಂಡು ಕುಳಿತಿದ್ದಾರೆ.

ಇನ್ನು ನಿನ್ನೆ ವಿಚಾರಣೆ ನಡೆಸಿ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ನಂತರ ಪವಿತ್ರಾ ಗೌಡರನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಿ ಅವರು ಅಲ್ಲಿ ರಾತ್ರಿಯನ್ನು ಕಳೆದಿದ್ದರು. ಇಂದು ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯ ಕಸ್ಟಡಿಗೆ ಒಪ್ಪಿಸಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!