ಹೊಸದಿಗಂತ ಡಿಜಿಟಲ್ ಡೆಸ್ಕ್;
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೇಲ್ ಕೋರಿ ಹೈಕೋರ್ಟ್‌ಗೆ ದರ್ಶನ್ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ಮಂಗಳವಾರಕ್ಕೆ (ಅ.29) ಮುಂದೂಡಿಕೆಯಾಗಿದೆ.
ದರ್ಶನ್ ಬೆನ್ನು ನೋವಿನ ವೈದ್ಯಕೀಯ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಬಳ್ಳಾರಿ ಜೈಲಾಧಿಕಾರಿಗಳು ಸಲ್ಲಿಸಿದರು. ಆರೋಗ್ಯ ಕಾರಣವೊಡ್ಡಿ ದರ್ಶನ್ ಪರ ವಕೀಲರಾದ ಸಿವಿ ನಾಗೇಶ್ (CV Nagesh) ವಾದ ಮಂಡಿಸಿದರು. ಸಿಟಿ ಸ್ಕ್ಯಾನ್, ಎಂಆರ್‌ಐ ರಿಪೋರ್ಟ್‌ಗಳನ್ನು ಮಾಡಿಸಲಾಗಿದೆ. ವರದಿಯಲ್ಲಿ ದರ್ಶನ್‌ಗೆ ಈ ಕೂಡಲೇ ಸರ್ಜರಿ ಮಾಡಬೇಕು ಅಂತಿದೆ. ಹಾಗಾಗಿ ಮಧ್ಯಂತರ ಜಾಮೀನು ನೀಡಬೇಕು ಅಂತ ನಾಗೇಶ್ ವಾದ ಮಂಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಡ್ಜ್, ಈಗಷ್ಟೇ ಮೆಡಿಕಲ್ ರಿಪೋರ್ಟ್ ಸಿಕ್ಕಿದೆ. ಹಾಗಾಗಿ 2 ಕಡೆ ವಾದಕ್ಕೆ ಅವಕಾಶ ನೀಡಬೇಕಿದೆ. ಬಳಿಕ ವೈದ್ಯಕೀಯ ವರದಿ ಓದಿದ ನ್ಯಾಯಾಧೀಶರು, ಬಳ್ಳಾರಿ ಮತ್ತು ಬೆಂಗಳೂರು ಎರಡು ಕಡೆಗಳಲ್ಲೂ ಚಿಕಿತ್ಸೆ ಕೊಡಿಸಬಹುದು ಅಂತಿದೆ ಎಂದರು.
ಈ ವೇಳೆ ಬಳ್ಳಾರಿಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲ. ಹಾಗಾಗಿ ಬೆಂಗಳೂರಿನ ಖಾಸಗಿ ಚಿಕಿತ್ಸೆಗೆ ಅವಕಾಶ ಕೊಡಿ ಅಂತ ಸಿ.ವಿ ನಾಗೇಶ್ ಮನವಿ ಮಾಡಿದ್ರು. ಈ ವೇಳೆ ವಾದ-ಪ್ರತಿವಾದಕ್ಕೆ ಅವಕಾಶ ಕೊಡೋಣ ಅಂದ ಜಡ್ಜ್ ಮಂಗಳವಾರ ಬೆಳಗ್ಗೆಗೆ ವಿಚಾರಣೆ ಮುಂದೂಡಿದರು.