ಹೊಸದಿಗಂತ ವರದಿ,ಶ್ರೀರಂಗಪಟ್ಟಣ :
ತಾಲೂಕಿನ ಆರತಿ ಉಕ್ಕಡ ಅಹಲ್ಯದೇವಿ ಮಾರಮ್ಮ ದೇವಸ್ಥಾನಕ್ಕೆ ನಟ ದರ್ಶನ ಕುಟುಂಬ ಸಮೇತ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಬುಧವಾರ ಮಧ್ಯಾಹ್ನ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ನೊಂದಿಗೆ ಆಗಮಿಸಿದ ದರ್ಶನ್ ಅವರನ್ನ ದೇವಾಲಯದ ಸಮಿತಿ ಅಧ್ಯಕ್ಷ ಚಂದ್ರು ಅವರ ಹೂವಿನ ಹಾರ ಹಾಕಿ ಸ್ವಾಗತಿಸಿದರು.
ನಂತರ ದರ್ಶನ್ ಕುಟುಂಬದ ಸಮೇತರಾಗಿ ಗರ್ಭಗುಡಿ ಬಳಿ ತೆರಳಿದ ಅವರು ದೋಷ ನಿವಾರಣಾ ಪೂಜೆ ಸಲ್ಲಿಸಿ, ನಂತರ ತಡೆ ಒಡೆ ಹೊಡೆಸಿರುವುದಾಗಿ ತಿಳಿದು ಬಂದಿದೆ. ಈ ವೇಳೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೇರಿದಂತೆ ಅಪಾರ ಪ್ರಮಾಣ ಅಭಿಮಾನಿಗಳು ಇದ್ದರು.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿ, ನಂತರ ಜಾಮಿನಿನ ಮೇಲೆ ಹೊರ ಬಂದ ನಂತರ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಅಭಿಮಾನಿಗಳು ನಟ ದರ್ಶನ್ ಪರ ಜೈಕಾರ ಕೂಗಿದರು.