ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ದರ್ಶನ್‌ಗೆ ಬೆನ್ನುನೋವು ಇದೆ ಎಂದು ಕುಟುಂಬಸ್ಥರು ಪೊಲೀಸರಿಗೆ ಮೆಡಿಕಲ್ ರಿಪೋರ್ಟ್ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಜೈಲಧಿಕಾರಿಗಳು ಆರೋಪಿ ದರ್ಶನ್‌ಗೆ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಾರೆ.
ಜೈಲು ಡಾಕ್ಟರ್ ಮೂಲಕ ದರ್ಶನ್ ವೈದ್ಯಕೀಯ ರಿಪೋರ್ಟ್ ಪರಿಶೀಲನೆ ನಡೆಸಲಾಯಿತು. ಬೆನ್ನು ನೋವಿನಿಂದಾಗಿ ದರ್ಶನ್‌ಗೆ ಮೋಷನ್ ಸಮಸ್ಯೆ ಕೂಡ ಆಗಿದೆ. ಹೀಗಾಗಿ ವೆಸ್ಟರ್ನ್ ಟಾಯ್ಲೆಟ್ ಅಥವಾ ಸರ್ಜಿಕಲ್ ಚೇರ್‌ಗೆ ನಟ ಮನವಿ ಮಾಡಿದ್ದರು ಎನ್ನಲಾಗಿದೆ.
12 ಗಂಟೆ ಸುಮಾರಿಗೆ ಜೈಲು ವೈದ್ಯರು ದರ್ಶನ್ ಆರೋಗ್ಯ ತಪಾಸಣೆ ಮಾಡಿದರು. ಬೆನ್ನು ನೋವಿನ ತೀವ್ರತೆ ಬಗ್ಗೆ ವೈದ್ಯಕೀಯ ತಪಾಸಣೆ ಬಳಿಕ ಡಿಐಜಿಗೆ ಸಲ್ಲಿಕೆ ಮಾಡಲಾಗುವುದು. ಸದ್ಯ ಸಾಮಾನ್ಯ ಕೈದಿಯಂತೆ ದರ್ಶನ್‌ಗೂ ಜೈಲಲ್ಲಿ ತಪಾಸಣೆ ನಡೆಸಲಾಗಿದೆ. ಬೆನ್ನು ನೋವಿನ ಕಾರಣ ಕೆಲವು ಮಾತ್ರೆಗಳ ಬಗ್ಗೆ ದರ್ಶನ್ ಮನವಿ ಮಾಡಿದ್ದರು. ವೈದ್ಯರ ತಪಾಸಣೆ ಬಳಿಕ ಅಗತ್ಯ ಇದ್ದರೆ ಸರ್ಕಾರಿ ಆಸ್ಪತ್ರೆಯ ಮೆಡಿಸಿನ್‌ಗಳನ್ನ ಕೊಡುವುದಾಗಿ ಜೈಲಧಿಕಾರಿಗಳು ತಿಳಿಸಿದ್ದಾರೆ.