ನಟ ದಿಗಂತ್ ಆರೋಗ್ಯವಾಗಿದ್ದಾರೆ: ಪತ್ನಿ ಐಂದ್ರಿತಾ ರೇ ಮಾಹಿತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್ ವುಡ್ ನಟ ದಿಗಂತ್ ಆರೋಗ್ಯವಾಗಿದ್ದಾರೆ. ಅವರಿಗೆ ಶಸ್ತ್ರ ಚಿಕಿತ್ಸೆ ಮುಗಿದಿದ್ದು, ಯಾವುದೇ ಆತಂಕವಿಲ್ಲ. ಇಂದು ಅಥವಾ ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ದಿಗಂತ್ ಪತ್ನಿ ಐಂದ್ರಿತಾ ರೇ ಪತಿಯ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.
ನಾನು ಮತ್ತು ದಿಗಂತ್ ಗೋವಾಕ್ಕೆ ವೆಕೇಷನ್ ಗಾಗಿ ಹೋಗಿದ್ದೆವು. ಗೋವಾದ ರೆಸಾರ್ಟ್ ಒಂದರ ಬಳಿಯಲ್ಲಿ ಪಲ್ಟಿ ಹೊಡೆಯುವಾಗ ಅವರಿಗೆ ಗಾಯವಾಗಿತ್ತು.
ಗೋವಾದ ರೆಸಾರ್ಟ್ ಬಳಿಯಲ್ಲಿ ಗಾಯಗೊಂಡ ಅವರನ್ನು, ಕೂಡಲೇ ಗೋವಾದಲ್ಲಿರುವಂತ ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಅಲ್ಲಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸರ್ಜರಿ ಸಲುವಾಗಿ ಏರ್ ಲಿಫ್ಟ್ ಮೂಲಕ ಕರೆತರಲಾಗಿತ್ತು ಎಂದರು.
ಮಣಿಪಾಲ್ ಆಸ್ಪತ್ರೆಯಲ್ಲಿ ಅವರಿಗೆ ಆದಂತ ಗಾಯಕ್ಕೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಇದೀಗ ಅವರು ಆರೋಗ್ಯವಾಗಿದ್ದಾರೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಐಂದ್ರಿತಾ ಸ್ಪಷ್ಟ ಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!