ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಳ್ಳಾಲ ತಾಲೂಕಿನ ಕಲ್ಲಾಪು ಬಳಿಯ ಬುರ್ದುಗೋಳಿ ಕೊರಗಜ್ಜ ಕ್ಷೇತ್ರಕ್ಕೆ ನಟ ದುನಿಯಾ ವಿಜಯ್ ಇಂದು ಭೇಟಿ ನೀಡಿದ್ದಾರೆ.
ಗುಳಿಗ-ಕೊರಗಜ್ಜ ಉಧ್ಬವ ಶಿಲೆಯ ಆದಿಸ್ಥಳವಾದ ಬುರ್ದುಗೋಳಿ ಕ್ಷೇತ್ರಕ್ಕೆ ಭೇಟಿ ನೀಡಿ ಬುರ್ದುಗೋಳಿ ಸಾನಿಧ್ಯದ ದೈವಗಳಿಗೆ ನಟ ದುನಿಯಾ ವಿಜಯ್ ಪ್ರಾರ್ಥನೆ ಸಲ್ಲಿಸಿದ್ದಾರೆ.
ಇದೇ ಸಂದರ್ಭದಲ್ಲಿ ಬುರ್ದುಗೋಳಿ ಕ್ಷೇತ್ರದ ವತಿಯಿಂದ ದುನಿಯಾ ವಿಜಯ್ ಅವರನ್ನು ಸನ್ಮಾನಿಸಲಾಯಿತು. ಭೀಮಾ ಚಿತ್ರದ ಯಶಸ್ಸಿನ ನಂತರ ತಮ್ಮ 29ನೇ ಸಿನಿಮಾದ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಬಂದಿದ್ದ ದುನಿಯಾ ವಿಜಯ್ ಚಿತ್ರೀಕರಣದ ವೇಳೆ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.