ಹೊಸದಿಗಂತ ಡಿಜಿಟಲ್ ಡೆಸ್ಕ್:
60ನೇ ವರ್ಷದ ಸಂಭ್ರಮದಲ್ಲಿರುವ ನಟ ಜಗ್ಗೇಶ್ (Jaggesh)ಅವರು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದು, ಸದ್ಯದಲ್ಲೇ ತಮ್ಮ ಜೀವನಕಥನ (Biography) ಪುಸ್ತಕ (Book) ರೂಪದಲ್ಲಿ ಬರಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ಪತ್ರಿಕೆಯಲ್ಲಿ ಬಂದ ಹಳೆಯ ಲೇಖಕನವೊಂದನ್ನು ಹಂಚಿಕೊಂಡಿರುವ ಅವರು, ಸಹೋದರಿ ತುಂಗರೇಣುಕಾ (Tungarenuka) ಅವರು ನನ್ನ ಕುರಿತಾಗಿ ಪುಸ್ತಕ ಬರೆಯುತ್ತಿದ್ದಾರೆ. ಶೀಘ್ರದಲ್ಲೇ ನಿಮ್ಮ ಮುಂದೆ ಎಂದು ಬರೆದುಕೊಂಡಿದ್ದಾರೆ.
ತಮ್ಮ ಬದುಕಿನ ನಾನಾ ಘಟನೆಗಳನ್ನು ಈ ಪುಸ್ತಕದಲ್ಲಿ ತುಂಗರೇಣುಕಾ ಹಿಡಿದಿಟ್ಟಿರುವ ಕುರಿತಾಗಿಯೂ ಅವರು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ಪುಸ್ತಕ ಯಾವಾಗ ರಿಲೀಸ್ ಆಗಲಿದೆ ಎನ್ನುವ ಕುರಿತು ಅವರು ವಿವರಣೆ ನೀಡಿಲ್ಲ. ಆದರೆ, ಜೀವನಕಥನ ಪುಸ್ತಕವಾಗಿ ಬರುತ್ತಿರುವುದನ್ನು ಹುಟ್ಟು ಹಬ್ಬದಂದು ರಿವೀಲ್ ಮಾಡಿದ್ದಾರೆ.
ನಿನ್ನೆಯಷ್ಟೇ ಜಗ್ಗೇಶ್ ನಟಿಸಿದ ಸಿನಿಮಾ ತಂಡದವರು ಸರ್ ಪ್ರೈಸ್ ರೀತಿಯಲ್ಲಿ ಉಡುಗೊರೆಯನ್ನು ನೀಡಿದ್ದಾರೆ. ಗುರು ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬಂದ ‘ರಂಗನಾಯಕ’ ಚಿತ್ರ ತಂಡ ಮತ್ತು ಸಂತೋಷ್ ಆನಂದ್ ರಾಮ್ ನಿರ್ದೇಶನದ ರಾಘವೇಂದ್ರ ಸ್ಟೋರ್ಸ್ ಚಿತ್ರತಂಡ ಇಂದು ವಿಭಿನ್ನ ರೀತಿಯಲ್ಲಿ ಜಗ್ಗೇಶ್ ಹುಟ್ಟು ಹಬ್ಬ ಆಚರಿಸಿವೆ.