ಪತ್ನಿ ಪರಿಮಳಾ ಸಾಧನೆಗೆ ಹೆಮ್ಮೆ ವ್ಯಕ್ತಪಡಿಸಿದ ನಟ ಜಗ್ಗೇಶ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ನಟ, ಸಂಸದ ಜಗ್ಗೇಶ್ ಅವರು ಪತ್ನಿ ಪರಿಮಳಾ ಮಾಡಿದ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು, ‘ಮಡದಿ ಪರಿಮಳಾ ಎಸ್​ಎಸ್​ಎಲ್​ಸಿ ಓದುವಾಗ ನನ್ನ ಮದುವೆ ಆದದ್ದು. ಪರಿಮಳ ನನ್ನ ಕೇಳಿಕೊಂಡಿದ್ದು ಓದಿಸು ಎಂದು. ನಾನು ಮಾತು ಕೊಟ್ಟೆ. ಎಲ್ಲಿಯವರೆಗೆ ಓದುತ್ತೀಯೋ, ಅಲ್ಲಿಯವರೆಗೆ ಓದಿಸುವೆ ಎಂದು ಭರವಸೆ ಕೊಟ್ಟಿದೆ. 1985ರ ಸಮಯ. ಕಾಸು, ಕೆಲಸ ಇಲ್ಲದ ದಿನಗಳು ಅವು. ಅವಳ ವಿದ್ಯಾಭ್ಯಾಸಕ್ಕೆ ಹೇಗೆ ಹಣ ಹೊಂದಿಕೆ ಮಾಡುವುದು ಎಂಬ ಚಿಂತೆ ಇತ್ತು’ .

ಪಿಯುಸಿಯಲ್ಲಿ ಮೆರಿಟ್ ಪಡೆದು BE ARCಗೆ ಬಿಎಂಎಸ್​​ನಲ್ಲಿ ಸೀಟ್​ ಪಡೆದೇ ಬಿಟ್ಟಳು. ಅಲ್ಲಿಂದ ಇಲ್ಲಿಯವರೆಗೂ ನ್ಯೂಟ್ರಿಷಿಯನ್​ನಲ್ಲೇ 5 ಪ್ರಮಾಣಪತ್ರ ಪಡೆದು ತನ್ನದೆ ಸ್ವಂತ ಸಂಸ್ಥೆ ನಡೆಸುತ್ತಿದ್ದಾಳೆ. ಪ್ರಪ್ರಥಮವಾಗಿ ವಿದೇಶ ನೆಲದಲ್ಲಿ ತನ್ನ ಪ್ರತಿಭೆ ಅನಾವರಣ ಮಾಡುವ ಅದೃಷ್ಟ ಅವಳ ಪ್ರತಿಭೆಗೆ ಒದಗಿ ಬಂದಿದೆ. ಗಂಡನಾಗಿ ನನಗೆ ಮಡದಿಯ ಮೇಲೆ ಹೆಮ್ಮೆ. ನಿಮ್ಮ ಶುಭಹಾರೈಕೆಯು ಇರಲಿ. ಶುಭದಿನ’ ಎಂದು ಜಗ್ಗೇಶ್ ತಮ್ಮ ಬರಹ ಕೊನೆಗೊಳಿಸಿದ್ದಾರೆ.

ಜಗ್ಗೇಶ್​ ಮತ್ತು ಪರಿಮಳಾ ಅವರದ್ದು ಲವ್​ ಮ್ಯಾರೇಜ್​. ತುಂಬ ಚಿಕ್ಕ ವಯಸ್ಸಿನಲ್ಲಿಯೇ ಜಗ್ಗೇಶ್ ಪ್ರೀತಿಯಲ್ಲಿ ಬಿದ್ದಿದ್ದರು. ಆಗ ಪರಿಮಳಾ ಅವರಿಗೆ ಕೇವಲ 14 ವರ್ಷ. ಜಗ್ಗೇಶ್​ ಅವರಿಗೆ 19ರ ಪ್ರಾಯ. ಕೆಲವೇ ಕೆಲವು ಸ್ನೇಹಿತರ ಸಮ್ಮುಖದಲ್ಲಿ 1984ರ ಮಾ.22ರಂದು ಜಗ್ಗೇಶ್​ ಮತ್ತು ಪರಿಮಳಾ ರಿಜಿಸ್ಟರ್​ ಮ್ಯಾರೇಜ್​ ಆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!