ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ದಿನೇ ದಿನೇ ಸೈಬರ್ ಕಳ್ಳರ ಸಂಖ್ಯೆ ಹೆಚ್ಚುತ್ತಿದೆ. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳ ವರೆಗೆ ಎಲ್ಲರ ಸಾಮಾಜಿಕ ಜಾಲತಾಣಗಳ ಮೇಲೆ ಕನ್ನ ಹಾಕುತ್ತಾರೆ.
ಇದೀಗ ತಮಿಳಿನ ಖ್ಯಾತ ನಟ ಕಾರ್ತಿ ಅವರ ಸರದಿ. ಅವರ ಫೇಸ್ಬುಕ್ ಖಾತೆ ಮೇಲೆ ಸೈಬರ್ ಕಳ್ಳರು ಕಣ್ಣು ಹಾಕಿದ್ದಾರೆ. ಈ ವಿಚಾರದ ಬಗ್ಗೆ ಕಾರ್ತಿ ಮಾಹಿತಿ ನೀಡಿದ್ದು, ಫೇಸ್ಬುಕ್ ಖಾತೆಯನ್ನು ಮರಳಿ ಪಡೆಯಲು ಪ್ರಯತ್ನವಾಗುತ್ತಿದೆ.
Hello guys, my Facebook page has been hacked. We are trying to restore it with Fb team.
— Karthi (@Karthi_Offl) November 14, 2022
ಕಾರ್ತಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿದ್ದು, ಸಿನಿಮಾಗಳ ಬಗ್ಗೆ ಅಪ್ಡೇಟ್ ನೀಡುತ್ತಾ ಇರುತ್ತಾರೆ. ಆದರೆ, ಈಗ ಅವರ ಫೇಸ್ಬುಕ್ ಖಾತೆಗೆ ಸೈಬರ್ ಕಳ್ಳರು ಕನ್ನ ಹಾಕಿದ್ದಾರೆ. ಇದು ಅವರ ಗಮನಕ್ಕೆ ಬಂದಿದ್ದು, ಈ ಬಗ್ಗೆ ತಕ್ಷಣಕ್ಕೆ ಮಾಹಿತಿ ನೀಡಿದ್ದಾರೆ.
ಕಾರ್ತಿ ಅವರ ಫೇಸ್ಬುಕ್ ಖಾತೆಯಿಂದ ಲೈವ್ ಬರಲಾಗಿದು, ಇದು ಕಾರ್ತಿ ಅಲ್ಲ ಎಂಬುದು ಅಭಿಮಾನಿಗಳಿಗೆ ಗೊತ್ತಾಗಿದೆ. ಆನ್ಲೈನ್ ಗೇಮ್ ಒಂದನ್ನು ಲೈವ್ ಮಾಡಲಾಗಿದೆ. ಈ ಲೈವ್ ಸುಮಾರು 3 ಗಂಟೆಗಳಿಗೂ ಅಧಿಕ ಕಾಲ ಇತ್ತು. ಸದ್ಯ (ನವೆಂಬರ್ 14, ಮಧ್ಯಾಹ್ನ 2.15) ಫೇಸ್ಬುಕ್ ಖಾತೆ ಹ್ಯಾಕರ್ಸ್ ಕೈಯಲ್ಲೇ ಇದೆ.
ಈ ಬಗ್ಗೆ ಅವರು ತಿಳಿಸಿದ್ದು, ‘ನನ್ನ ಫೇಸ್ಬುಕ್ ಖಾತೆ ಹ್ಯಾಕ್ ಆಗಿದೆ. ನಾವು ಖಾತೆಯನ್ನು ಸರಿ ಮಾಡಲು ಪ್ರಯತ್ನಿಸುತ್ತಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.