BIG BOSS | ಶೂಟಿಂಗ್‌ ಮುಗಿಸಿದ ನಟ ಕಿಚ್ಚ ಸುದೀಪ, ಶೀಘ್ರವೇ ಪ್ರೋಮೋ ಔಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​​ ಸೀಸನ್​ 11 ತೆರೆಗೆ ಬರೋದಕ್ಕೆ ತಯಾರಿ ನಡೆಸುತ್ತಿದೆ ಅನ್ನೋ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಸಾಕಷ್ಟು ಅಭಿಮಾನಿಗಳು ಬಿಗ್​ಬಾಸ್​ ಯಾವಾಗ ಬರುತ್ತೆ ಎಂದು ಕಾಯುತ್ತಿದ್ದಾರೆ. ಸೀಸನ್​​-11ಕ್ಕೆ ಯಾರೆಲ್ಲ ಎಂಟ್ರಿ ಕೊಡ್ತಾರೆ ಅನ್ನೋದ್ರ ಬಗ್ಗೆ ಚರ್ಚೆ ಶುರುವಾಗ್ತಿದೆ.

ಬಿಗ್​ಬಾಸ್​​ ಮನೆಗೆ ಸುಖಾ ಸುಮ್ಮನೆ ಯಾರನ್ನೂ ಕರೆಸಲ್ಲ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನ, ಸಿನಿಮಾ ತಾರೆಯರನ್ನ, ಕ್ರೀಡಾಪಟುಗಳನ್ನು ಹಾಗೂ ​ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯತೆಗಳಿಸಿದವರನ್ನು ಕರೆಸಲಾಗುತ್ತದೆ.

ಜನಪ್ರಿಯತೆ ಹೆಚ್ಚು ಸಿಗೋದ್ರಿಂದ ಇಂಥ ಆಫರ್ ಬಂದರೆ ಯಾರೂ ಮಿಸ್​ ಮಾಡಿಕೊಳ್ಳಲ್ಲ. ಆಗಸ್ಟ್​ ಬರುತ್ತಿದ್ದಂತೆ ವೀಕ್ಷಕರು ಬಿಗ್​ಬಾಸ್​ ಬಗ್ಗೆ ಸಾಕಷ್ಟು ತಲೆ ಕಡೆಸಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ ಪ್ರತಿ ಸೀಸನ್​ ಶುರುವಾಗೋದು ಅಕ್ಟೋಬರ್​ ಕೊನೆ ವಾರ ಅಥವಾ ಸೆಪ್ಟಂಬರ್​ ಮೊದಲ ವಾರದಲ್ಲಿ. ಮೂರು ತಿಂಗಳ ಮುಂಚೇಯೇ ಒಂದಿಷ್ಟು ಊಹಾಪೋಹಗಳು ಓಡಾಡೋಕೆ ಶುರುವಾಗುತ್ತೆ.

ಸೀಸನ್ 1ರಿಂದ 10ರವರೆಗೆ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಬಿಗ್​ಬಾಸ್ ರಿಯಾಲಿಟಿ ಶೋ ಭರ್ಜರಿಯಾಗಿ ಮೂಡಿಬಂದಿದೆ. ಜೊತೆಗೆ ಕನ್ನಡಿಗರ ಮನಸ್ಸು ಗೆಲ್ಲೋದ್ರಲ್ಲಿ ಯಶಸ್ವಿ ಆಗಿದೆ. ಬಿಗ್ ಬಾಸ್ 11ನೇ ಸೀಸನ್​ಗೆ ಭರ್ಜರಿ ಸಿದ್ಧತೆ ನಡೆದಿದ್ದು, ಪ್ರೋಮೋ ಬಿಡುಗಡೆ ಮಾಡಲು ಬಿಗ್​ಬಾಸ್​ ಟೀಂ‌ ಪ್ಲಾನ್ ಹಾಕಿದೆ. ಬಿಗ್​ಬಾಸ್​ ಶೋನ ಪ್ರೋಮೋ ಶೂಟಿಂಗ್​ಗಾಗಿ ಕಿಚ್ಚ ಸುದೀಪ್​ ಹೈದ್ರಾಬಾದ್​ಗೆ ಹೋಗಿದ್ದರು. ಸದ್ಯ ಪ್ರೋಮೋ ಶೂಟಿಂಗ್ ಮುಗಿಸಿಕೊಂಡು ವಾಪಸ್​ ಆಗಿದ್ದಾರೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!