ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಕಿಚ್ಚ ಸುದೀಪ್ ( Actor Sudeep) ಅಭಿನಯದ ಮುಂದಿನ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೆ ಕುತೂಹಲ ಮೂಡಿದೆ. ಇದೀಗ ಸುದೀಪ್ 46 ನೇ ಚಿತ್ರದ ಬಗ್ಗೆ ಬಿಗ್ ಅಪ್ ಡೇಟ್ ಹೊರಬಿದ್ದಿದೆ.
ಈ ಹಿಂದೆ ಸುದೀಪ್ ಮೇ 24ರಂದು ತಮ್ಮ ಮುಂದಿನ ಸಿನಿಮಾದ ( Next moovie) ಮಾಹಿತಿಯನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದರು. ತಮಿಳಿನ ಕಲೈಪುಲಿ ಎಸ್ ತನು ಎಂಬ ನಿರ್ಮಾಪಕರ ಚಿತ್ರದಲ್ಲಿ ನಟಿಸುವುದಾಗಿ ಸುದೀಪ್ ಟ್ವೀಟ್ ಮಾಡಿದ್ದರು.
ನಂತರ ಸಿನಿಮಾದ ನಟಿ ಯಾರು..? ಉಳಿದ ಕಲಾವಿದರ ಬಗ್ಗೆ ಕುತೂಹಲ ಮೂಡಿತ್ತು. ಇದೀಗ ಮಹಾರಾಷ್ಟ್ರದ ಮುಂಬೈ ಮೂಲದ ನಟಿ ಸಿಮ್ರಾತ್ ಕೌರ್ ಸುದೀಪ್ 46ನೇ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗ್ತಿದೆ.
ತೆಲುಗು ಚಿತ್ರರಂಗದ ಮೂಲಕ ಬಣ್ಣ ಹಚ್ಚಿ ಸಿನಿಪ್ರಿಯರ ಗಮನ ಸೆಳೆದಿದ್ದ ನಟಿ ಸಿಮ್ರಾತ್ ಕೌರ್ ಸುದೀಪ್ ನಟನೆಯ 46ನೇ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸದ್ಯದಲ್ಲೇ ಚಿತ್ರದ ಟೀಸರ್ ( teaser) ಕೂಡ ರಿಲೀಸ್ ಆಗಲಿದ್ದು, ಕಿಚ್ಚನ ಅಭಿಮಾನಿಗಳಲ್ಲಿ ( Fans) ಕುತೂಹಲ ಮನೆ ಮಾಡಿದೆ.