ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್‌ವುಡ್ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಮಲಯಾಳಂ ನಟ ಮೋಹನ್‌ಲಾಲ್ ಅವರನ್ನು ಭೇಟಿಯಾಗಿದ್ದಾರೆ.
ಮೋಹನ್‌ನಾಲ್ ಅವರನ್ನು ತಾವು ಭೇಟಿಯಾಗಿರುವ ಬಗ್ಗೆ ಸ್ವತಃ ರಿಷಬ್ ಶೆಟ್ಟಿಯವರು ಎಕ್ಸ್‌ನಲ್ಲಿ (Twitter)ಪೋಸ್ಟ್ ಮಾಡಿದ್ದಾರೆ. ತಾವು ಅವರನ್ನು ಭೇಟಿಯಾಗಿದ್ದು ಖುಷಿಕೊಟ್ಟಿದೆ ಎಂದಿದ್ದಾರೆ. ‘An honor and a pleasure to meet the legendary @Mohanlal sir!’ ಎಂದು ಟೆಕ್ಸ್ಟ್ ಹಾಕಿದ್ದಾರೆ.
ಏ.17 ಬುಧವಾರದಂದು ಮೋಹನ್‌ಲಾಲ್ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಮುಂಜಾನೆ ಮಹಾಮಂಗಳಾರತಿಯಲ್ಲಿ ನಟ ಪಾಲ್ಗೊಂಡಿದ್ದರು