Monday, August 15, 2022

Latest Posts

ಹೈದರಾಬಾದ್‌ ರಸ್ತೆಗಳಲ್ಲಿ ಬಾಹುಬಲಿಯ ಕಾರ್‌ ರೇಸ್:‌ ಕ್ಷಣಾರ್ಧದಲ್ಲಿ ಮಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ರೇಸರ್‌ಗಳನ್ನು ಮೀರಿಸುವ ಹಾಗೆ ಕಾರು ಓಡಿಸುತ್ತಾರೆ. ತನ್ನ ಐಶಾರಾಮಿ ಲಾಂಬೋರ್ಗಿನಿ ಕಾರು ಹತ್ತಿ  ಮನೆ ಕಡೆ ಹೊರಟಿರುವ ವಿಡಿಯೋ ಇದೀಗ ವೈರಲ್‌ ಆಗಿದೆ. ಪ್ರಭಾಸ್ ಈ ಹಿಂದೆ ಲಂಬೋರ್ಗಿನಿ ಕಾರು ಖರೀದಿಸಿದ್ದು ಗೊತ್ತೇ ಇದೆ. ಇತ್ತೀಚೆಗಷ್ಟೇ ಮತ್ತೊಂದು ಲಂಬೋರ್ಗಿನಿ ಕಾರು ಖರೀದಿಸಿದ್ದಾರಂತೆ. ಹೈದರಾಬಾದ್‌ನಲ್ಲಿ ʻಪ್ರಾಜೆಕ್ಟ್ ಕೆʼ ಚಿತ್ರೀಕರಣವನ್ನು ಪೂರ್ಣಗೊಳಿಸಿದ ನಂತರ ರೇಸರ್‌ನಂತೆ ಕಾರು ಚಲಾಯಿಸಿದ್ದಾರೆ.

ಪ್ರಭಾಸ್‌ಗೆ ಕಾರುಗಳ ಬಗ್ಗೆ ಹೆಚ್ಚಿನ ಆಸಕ್ತಿ. ಅದಕ್ಕಾಗಿಯೇ ಪ್ರಭಾಸ್ ತಮ್ಮ ಪಾರ್ಕಿಂಗ್‌ನಲ್ಲಿ ಬರೀ ಕಾರುಗಳೇ ತುಂಬಿ ಹೋಗಿವೆ.  ಐಷಾರಾಮಿ ಲಂಬೋರ್ಗಿನಿ ಕಾರುಗಳ ಜೊತೆಗೆ ಜಾಗ್ವಾರ್, ಆಡಿ ಮತ್ತು ಬೆಂಜ್‌ನಂತಹ ದುಬಾರಿ ಸ್ಟೈಲಿಶ್ ಕಾರುಗಳನ್ನು ಸಹ ಪ್ರಭಾಸ್ ಹೊಂದಿದ್ದಾರೆ. ಪ್ರಭಾಸ್ ಇಷ್ಟು ವೇಗವಾಗಿ ಕಾರು ಓಡಿಸುತ್ತಿದ್ದರುಬುದನ್ನು ಕಂಡ ನಿರ್ಮಾಪಕರಿಗೆ ಟೆನ್ಷನ್ ಶುರುವಾಗಿದೆ. ಸುಮಾರು 2000 ಕೋಟಿ ಮೌಲ್ಯದ ಚಿತ್ರಗಳನ್ನು ಮಾಡುತ್ತಿರುವ ಪ್ಯಾನ್ ಇಂಡಿಯಾ ಸ್ಟಾರ್ ನೀನು ನಿಧಾನವಾಗಿ ಹೋಗು ಎಂದು ಎಚ್ಚರಿಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss