Thursday, December 1, 2022

Latest Posts

ನಟ ಪ್ರಕಾಶ್ ರಾಜ್ ಗೆ ಸಿಗುತ್ತಿಲ್ಲ ಸಿನಿಮಾ ಆಫರ್: ರಾಜಕೀಯ ಮಾತು ಸಿನಿ ಜೀವನಕ್ಕೆ ಮುಳುವಾಯಿತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಚಿತ್ರರಂಗ ಕಂಡ ಅತ್ಯುತ್ತಮ ನಟ ಪ್ರಕಾಶ್ ರಾಜ್. ತಮಗೆ ನೀಡುವ ಪಾತ್ರಕ್ಕೆ ಜೀವ ತುಂಬಿಸಿ ಸದಾ ಅಭಿಮಾನಿಗಳಿಗೆ ಹತ್ತಿರವಾಗುತ್ತಾರೆ.

ಆದರೆ ಕಳೆದ ಕೆಲವು ವರ್ಷಗಳಿಂದ ಅವರು ನಟನೆ ಜತೆಗೆ ತಮ್ಮ ರಾಜಕೀಯ ನಿಲುವುಗಳ ಮೂಲಕವೂ ಸುದ್ದಿಯಲ್ಲಿದ್ದಾರೆ. . ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಅವರು ಟೀಕಿಸುತ್ತಲೇ ಬಂದಿದ್ದಾರೆ. ಇದೀಗ ಅವರ ವೃತ್ತಿ ಜೀವನದ ಮೇಲೆ ಪ್ರಭಾವ ಬೀರಿದೆ.

ಹೌದು, ಈ ಬಗ್ಗೆ ಖುದ್ದು ಅವರೇ ಹೇಳಿಕೊಂಡಿದ್ದು, ‘ನನ್ನ ರಾಜಕೀಯ ನಿಲುವುಗಳು ನನ್ನ ವೃತ್ತಿ ಜೀವನದ ಮೇಲೆ ಪ್ರಭಾವ ಬೀರುತ್ತಿದೆ. ಕೆಲವರು ನನ್ನ ಜತೆ ಸಿನಿಮಾ ಮಾಡುತ್ತಿಲ್ಲ. ನನ್ನನ್ನು ದೂರ ಇಟ್ಟಿದ್ದಾರೆ. ನನ್ನ ಜತೆ ಸಿನಿಮಾ ಮಾಡಬೇಡಿ ಎಂದು ಅವರಿಗೆ ಯಾರೂ ಹೇಳಿಲ್ಲ. ಆದರೆ, ನನ್ನ ಜತೆ ಕೆಲಸ ಮಾಡಿದರೆ ಕೆಲವರು ಅವರನ್ನು ಒಪ್ಪದೆ ಇದ್ದರೆ ಎನ್ನುವ ಭಯ ಅಷ್ಟೇ. ನಾನು ಅಂತಹ ಆಫರ್​ಗಳನ್ನು ಬಿಡುವಷ್ಟು ಬಲಶಾಲಿ ಹಾಗೂ ಶ್ರೀಮಂತನಾಗಿದ್ದೇನೆ. ನನ್ನ ಭಯವೇ ಮತ್ತೊಬ್ಬರ ಶಕ್ತಿ ಆಗಬಹುದು’ ಎಂದು ಹೇಳಿದ್ದಾರೆ.

ಕೆಲವರು ಸರ್ಕಾರ ಮಾಡುವ ತಪ್ಪಿನ ವಿರುದ್ಧ ಧ್ವನಿ ಎತ್ತಿದರೆ ಇನ್ನೂ ಕೆಲವರು ಸುಮ್ಮನಿರುತ್ತಾರೆ.‘ಕೆಲ ಕಲಾವಿದರು ಸೈಲೆಂಟ್ ಆಗಿದ್ದಾರೆ. ನಾನು ಅವರನ್ನು ದೂರುವುದಿಲ್ಲ. ಬಹುಶಃ ಅವರು ಅದನ್ನು ಭರಿಸಲಾರರು. ನಾನು ಟೀಕೆಯನ್ನು ಮುಂದುವರಿಸುತ್ತೇನೆ’ ಎಂದಿದ್ದಾರೆ ಪ್ರಕಾಶ್ ರೈ.

ಪ್ರಕಾಶ್ ರಾಜ್ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ಮಣಿರತ್ನಂ ಅವರ ಸೂಪರ್ ಹಿಟ್ ಸಿನಿಮಾ ‘ಪೊನ್ನಿಯಿನ್ ಸೆಲ್ವನ್ 1’ ಚಿತ್ರದಲ್ಲಿ. ಅವರು ಪ್ರಮುಖ ಪಾತ್ರ ಮಾಡಿದ್ದರು. ‘ಮುಖ್ಬಿರ್: ದಿ ಸ್ಟೋರಿ ಆಫ್ ಸ್ಪೈ’ ಸೀರಿಸ್​ನಲ್ಲೂ ಪ್ರಕಾಶ್ ಕಾಣಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!