ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನಸಭೆ ಚುನಾವಣೆಯಲ್ಲಿ ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ತಮ್ಮ ‘ಮಾಮ’ ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಬೆಂಬಲ ನೀಡುವುದಾಗಿ ನಿನ್ನೆ ಘೋಷಿಸಿದ್ದರು. ಈ ನಿರ್ಧಾರವನ್ನು ಅನೇಕರು ಮೆಚ್ಚಿಕೊಂಡರೇ , ಬಹುಭಾಷಾ ನಟ ಪ್ರಕಾಶ್ ರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿನ್ನೆಯಷ್ಟೇ ತುಂಬಾ ನೋವಾಗಿದೆ ಎಂದಿದ್ದ ಪ್ರಕಾಶ್ ರಾಜ್ , ಇಂದು ಮತ್ತೆ ಟ್ವೀಟ್ ಮಾಡಿ ಸುದೀಪ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
‘ಸುದೀಪ್.. ಒಬ್ಬ ಮೇರು ಕಲಾವಿದನಾಗಿ ಸಮಾಜದ ಎಲ್ಲ ವರ್ಗದ ಪ್ರೀತಿಯಿಂದ ಬೆಳೆದ ನೀವು ,ಜನ ಸಾಮಾನ್ಯನ ದನಿಯಾಗುವಿರಿ ಎಂದು ಆಶಿಸಿದ್ದೆ.ಆದರೆ ತಾವು ಒಂದು ರಾಜಕೀಯ ಪಕ್ಷದ ಬಣ್ಣ ಬಳಿದುಕೊಳ್ಳುತ್ತೀರಿ ಎಂದು ನಿರೀಕ್ಷಿಸಿರಲ್ಲ ..ಇನ್ನು ಮುಂದೆ ನಿಮ್ಮನ್ನೂ .. ನಿಮ್ ಪಕ್ಷವನ್ನು ಪ್ರಶ್ನಿಸುವ ಜನ ದನಿಗೆ ತಯಾರಾಗಿರಿ ..’ ಎಂದು ಟ್ವೀಟ್‌ನಲ್ಲಿ ಪ್ರಕಾಶ್ ರಾಜ್ ಬರೆದಿದ್ದಾರೆ.
ಸುದೀಪ್.. ಒಬ್ಬ ಮೇರು ಕಲಾವಿದನಾಗಿ ಸಮಾಜದ ಎಲ್ಲ ವರ್ಗದ ಪ್ರೀತಿಯಿಂದ ಬೆಳೆದ ನೀವು ,ಜನ ಸಾಮಾನ್ಯನ ದನಿಯಾಗುವಿರಿ ಎಂದು ಆಶಿಸಿದ್ದೆ.ಆದರೆ ತಾವು ಒಂದು ರಾಜಕೀಯ ಪಕ್ಷದ ಬಣ್ಣ ಬಳಿದುಕೊಳ್ಳುತ್ತೀರಿ ಎಂದು ನಿರೀಕ್ಷಿಸಿರಲ್ಲ ..ಇನ್ನು ಮುಂದೆ ನಿಮ್ಮನ್ನೂ .. ನಿಮ್ ಪಕ್ಷವನ್ನು ಪ್ರಶ್ನಿಸುವ ಜನ ದನಿಗೆ ತಯಾರಾಗಿರಿ ..@KicchaSudeep #justasking
— Prakash Raj (@prakashraaj) April 6, 2023
ಮತ್ತೆ ಮುಂದುವರಿಸಿ, ಸುದೀಪ್ ಅವರ ಪರೋಕ್ಷವಾಗಿ ಟಾಂಗ್ ನೀಡಿದ್ದು, ‘ ‘ನೋಡ್ರಪ್ಪ… ನಿಮ್ ಮಾಮನೊ.. ನಿಮ್ ಅತ್ತೇನೊ.. ನಿಮ್ ಕಷ್ಟಕಾಲದಲ್ಲಿ ಸಹಾಯ ಮಾಡಿದ್ರೆ.. ನೀವು ದುಡಿದಿದ್ರಲ್ಲಿ 10%..20% ಇಲ್ಲ 30 % ಕೊಡಿ….. ಅದು ನಿಮ್ಮಿಷ್ಟ .. ಆದ್ರೆ .. ಪ್ರಜೆಗಳ 30% ಕೊಳ್ಳೆ ಹೊಡೆಯೊಕ್ ಬಿಡ್ಬೀಡಿ .. ಅಷ್ಟೆ..ಅಷ್ಟೇ..’ ಎಂದು ಬರೆದುಕೊಂಡಿದ್ದಾರೆ.
ನೋಡ್ರಪ್ಪ… ನಿಮ್ ಮಾಮನೊ.. ನಿಮ್ ಅತ್ತೇನೊ.. ನಿಮ್ ಕಷ್ಟಕಾಲದಲ್ಲಿ ಸಹಾಯ ಮಾಡಿದ್ರೆ.. ನೀವು ದುಡಿದಿದ್ರಲ್ಲಿ 10%..20% ಇಲ್ಲ 30 % ಕೊಡಿ….. ಅದು ನಿಮ್ಮಿಷ್ಟ .. ಆದ್ರೆ .. ಪ್ರಜೆಗಳ 30% ಕೊಳ್ಳೆ ಹೊಡೆಯೊಕ್ ಬಿಡ್ಬೀಡಿ .. ಅಷ್ಟೆ..ಅಷ್ಟೇ … #justasking
— Prakash Raj (@prakashraaj) April 6, 2023
ಕಿಚ್ಚ ಸುದೀಪ್ ಸುದ್ದಿಗೋಷ್ಠಿಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ‘ಮಾಮ’ ಎಂದೇ ಕರೆಯುತ್ತಿದ್ದರು. ಅದನ್ನೇ ಇರಿಸಿಕೊಂಡು ಪ್ರಕಾಶ್ ರಾಜ್ ಪರೋಕ್ಷವಾಗಿ ಸುದೀಪ್‌ಗೆ ಟಾಂಗ್ ನೀಡಿದ್ದಾರೆ.