ಹೊಸದಿಗಂತ ಡಿಜಿಟಲ್ ಡೆಸ್ಕ್ :
ತೆಲುಗು ನಟ ರಾಮ್ ಚರಣ್ (Ram Charan) ಅನೇಕ ಉತ್ತಮ ಸಿನಿಮಾ ನೀಡುವ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಇದೀಗ ಸಿನಿಮಾ ಬಿಟ್ಟು ಹೊಸ ವಿಚಾರವಾಗಿ ಸುದ್ದಿಯಲ್ಲಿದ್ದು, ಈ ಮೂಲಕವೂ ಎಲ್ಲರ ಪ್ರಶಂಶೆಪಡೆದಿದ್ದಾರೆ .
ಅದೇನೆಂದರೆ ಕ್ಯಾನ್ಸರ್‌ನಿಂದ (Cancer) ಬಳಲುತ್ತಿರುವ ಅಭಿಮಾನಿಯ ಕೊನೆ ಆಸೆಯನ್ನ ಈಡೇರಿಸಿದ್ದಾರೆ.
ಪುಟ್ಟ ಅಭಿಮಾನಿಯ ಪ್ರೀತಿಗಾಗಿ ಮತ್ತು ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಬಾಲಕನ ಆಸೆಯನ್ನ ಪೂರೈಸಿದ್ದಾರೆ.
Through #MakeaWishFoundation our #ManOfMasses Mega Power Star @AlwaysRamCharan garu met a 9yr old kid ailing from cancer. The kid’s wish of meeting his favourite star was fulfilled with the actor spending quality time with him. #ManOfMassesRamCharan #Ramcharan pic.twitter.com/vAPMAl9VdV
— SivaCherry (@sivacherry9) February 9, 2023
9 ವರ್ಷದ ಬಾಲಕ ಮಣಿ ಕುಶಾಲ್ (Mani Kushal), ಕ್ಯಾನ್ಸರ್‌ನಿಂದ ಬಳಲುತ್ತಿದ್ದಾನೆ. ಆತನನ್ನು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಆತ ರಾಮ್ ಚರಣ್ ಅವರ ದೊಡ್ಡ ಅಭಿಮಾನಿ. ಮಣಿ ಕುಶಾಲ್‌ಗೆ ರಾಮ್ ಚರಣ್ ಅವರನ್ನು ಭೇಟಿ ಮಾಡಬೇಕು ಎನ್ನುವ ಆಸೆ ಇತ್ತು. ಈ ಆಸೆಯನ್ನು ಅವರು ಈಡೇರಿಸಿದ್ದಾರೆ. ಆಸ್ಪತ್ರೆಗೆ ತೆರಳಿ ಬಾಲಕನನ್ನು ಭೇಟಿಯಾಗಿ ಅವರ ಯೋಗ ಕ್ಷೇಮ ವಿಚಾರಿದ್ದಾರೆ. ಈ ಕುರಿತ ಫೋಟೋ ವೈರಲ್ ಆಗಿದೆ.
ರಾಮ್ ಚರಣ್ ಅವರದ್ದು ವಿಶಾಲ ಹೃದಯ ಎಂದು ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡ್ತಿದ್ದಾರೆ. `ತೆರೆಮೇಲೆ ಮಾತ್ರವಲ್ಲ, ತೆರೆ ಹಿಂದೆಯೂ ನೀವು ಇಷ್ಟ ಆಗೋದು ಇದಕ್ಕೆ’ ಎಂದು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ರಾಮ್ ಚರಣ್ ಬಗ್ಗೆ ಬರೆದುಕೊಂಡಿದ್ದಾರೆ.