ನಟ ರಾಮ್​ ಚರಣ್​ಗೆ ಗೌರವ ಡಾಕ್ಟರೇಟ್, ಅಭಿಮಾನಿಗಳು ಫುಲ್‌ ಖುಷ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟ ರಾಮ್‌ಚರಣ್‌ಗೆ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಲಾಗಿದೆ.

ಹೌದು, ಚಿತ್ರರಂಗದಲ್ಲಿ ಅವರು ಮಾಡಿದ ಸಾಧನೆ ಸಾಧನೆಯನ್ನು ಗುರುತಿಸಿ ಗೌರವ ಡಾಕ್ಟರೇಟ್​ ನೀಡಲಾಗುತ್ತಿದೆ. ಏಪ್ರಿಲ್​ 13ರಂದು ಚೆನ್ನೈನ ವೇಲ್ಸ್​ ಯೂನಿವರ್ಸಿಟಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಅವರಿಗೆ ಗೌರವ ಡಾಕ್ಟರೇಟ್​ ಪ್ರದಾನ ಮಾಡಲಾಗುತ್ತಿದೆ.

ಅಭಿಮಾನಿಗಳು ಡಾಕ್ಟರ್‌ ರಾಮ್‌ ಚರಣ್‌ ಎಂದು ಕರೆಯಲು ಆರಂಭಿಸಿದ್ದು, ಖುಷಿ ಪಟ್ಟಿದ್ದಾರೆ. ಸದ್ಯ ರಾಮ್​ ಚರಣ್​ ಅವರು ‘ಗೇಮ್​ ಚೇಂಜರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಶಂಕರ್​ ನಿರ್ದೇಶನ ಮಾಡುತ್ತಿದ್ದಾರೆ. ಚುನಾವಣೆ ಕುರಿತ ಕಥಾವಸ್ತುವನ್ನು ಈ ಸಿನಿಮಾ ಹೊಂದಿದೆ. ಈ ಚಿತ್ರದ ಮೇಲೆ ಅಭಿಮಾನಿಗಳಿಗೆ ಸಖತ್​ ನಿರೀಕ್ಷೆ ಇದೆ. ರಾಮ್​ ಚರಣ್​ ಅವರಿಗೆ ಜೋಡಿಯಾಗಿ ಕಿಯಾರಾ ಅಡ್ವಾಣಿ ಅವರು ನಟಿಸುತ್ತಿದ್ದಾರೆ. ಮೈಸೂರಿನಲ್ಲಿಯೂ ‘ಗೇಮ್​ ಚೇಂಜರ್​’ ಶೂಟಿಂಗ್​ ಆಗಿದೆ ಎಂಬುದು ವಿಶೇಷ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!