ನಟ ರಣ್​​ವೀರ್ ಶೋರೆ ಅವರ ತಂದೆ ಕೃಷ್ಣನ್ ದೇವ್ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಬಾಲಿವುಡ್ ನಟ ರಣ್​​ವೀರ್ ಶೋರೆ ಅವರ ತಂದೆ ಕೃಷ್ಣನ್ ದೇವ್ ನಿಧನ ಹೊಂದಿದ್ದಾರೆ.
ಖೋಸ್ಲಾ ಕಾ ಘೋಸ್ಲಾ, ಟ್ರಾಫಿಕ್ ಸಿಗ್ನಲ್, ಭೇಜಾ ಫ್ರೈ ಮತ್ತು ಲೂಟ್‌ಕೇಸ್‌ನಂತಹ ಚಲನಚಿತ್ರಗಳಿಗೆ ಹೆಸರುವಾಸಿಯಾದ ರಣ್​​ವೀರ್ ಶೋರೆ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ನಲ್ಲಿ ಇಂದು ಈ ಕಹಿ ಸುದ್ದಿ ತಿಳಿಸಿದ್ದಾರೆ .

ಶುಕ್ರವಾರ ಸಂಜೆ 92ರ ಹರೆಯದ ತಮ್ಮ ತಂದೆ ಮಕ್ಕಳು ಮೊಮ್ಮಕ್ಕಳೊಂದಿಗೆ ಇದ್ದ ಸಮಯದಲ್ಲಿ ನಿಧನರಾದರು. ಅವರು ಅದ್ಭುತವಾದ ನೆನಪುಗಳನ್ನು ಮತ್ತು ಅನೇಕ ಅಭಿಮಾನಿಗಳನ್ನು ಬಿಟ್ಟು ಹೋಗಿದ್ದಾರೆ. ನನ್ನ ಸ್ಫೂರ್ತಿ ಮತ್ತು ರಕ್ಷಣೆಯನ್ನು ನಾನು ಕಳೆದುಕೊಂಡಿದ್ದೇನೆ ಎಂದು ಬರೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!