ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ (West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಭೇಟಿಯಾಗಿದ್ದು, ಇದೀಗ ಸಲ್ಲು ರಾಜಕೀಯ ಅಖಾಡಕ್ಕೆ ಇಳಿಯುತ್ತಾರಾ? ಅಂಥದ್ದೊಂದು ಕುತೂಹಲವನ್ನು ಮೂಡಿಸಿದೆ .
ಮಮತಾ ಅವರನ್ನು ಸಲ್ಮಾನ್ ಭೇಟಿ ಆಗಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ದಿದಿ ಜೊತೆ ಸಲ್ಮಾನ್ ಹಲವು ನಿಮಿಷಗಳ ಕಾಲ ಮಾತನಾಡಿದ್ದಾರೆ.
ತಮ್ಮ ಭೇಟಿಗೆ ಬಂದ ಸಲ್ಮಾನ್ ಅವರನ್ನು ದಿದಿ ಶಾಲು ಹಾಕಿ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಸಲ್ಮಾನ್ ಕೂಡ ದಿದಿ ಭೇಟಿಯ ನಂತರ ಸಂಭ್ರಮದಿಂದ ಆ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಒಂದು ಕಡೆ ರಾಜಕೀಯ ಮತ್ತೊಂದು ಕಡೆ ಸಿನಿಮಾ ಸಂಬಂಧಿ ಕಾರ್ಯಕ್ರಮಕ್ಕೆ ಏನಾದರೂ ಸಲ್ಲು ಹೋಗಿದ್ದರಾ ಅನ್ನುವ ಪ್ರಶ್ನೆಗೆ ಸಲ್ಲು ಆಪ್ತರು , . ಅದೊಂದು ರಾಜಕೀಯ ಸಂಬಂಧ ಭೇಟಿ ಆಗಿರಲಿಲ್ಲ. ಅಭಿಮಾನಿಗಳನ್ನು ರಂಜಿಸಲು ಸಲ್ಮಾನ್ ‘ದಬಂಗ್ ಟೂರ್’ ಹೆಸರಿನಲ್ಲಿ ಲೈವ್ ಕಾರ್ಯಕ್ರಮ ಮಾಡುತ್ತಾರಂತೆ. ಅಂಥದ್ದೊಂದು ಕಾರ್ಯಕ್ರಮ ನೀಡಲು ಅವರು ಹೋಗಿದ್ದರಂತೆ. ಈ ಸಮಯದಲ್ಲಿ ಭೇಟಿ ಆಗಿದ್ದಾರೆ ಎನ್ನಲಾಗುತ್ತಿದೆ.
ಸಲ್ಮಾನ್ ಅವರಿಗೆ ಜೀವ ಬೆದರಿಕೆ ಇರುವುದರಿಂದ ದಿದಿ ಸರಕಾರ ಅವರಿಗೆ ಹೆಚ್ಚಿನ ಭದ್ರತೆ ನೀಡಿತ್ತಂತೆ. ಹಾಗಾಗಿ ಧನ್ಯವಾದಗಳನ್ನು ಹೇಳಲು ಹೋಗಿದ್ದರು ಎಂದು ಅವರ ಆಪ್ತರು ತಿಳಿಸಿದ್ದಾರೆ.