ಡ್ಯಾನ್ಸ್​​ ಮಾಡುತ್ತಿದ್ದಂತೆ ವೇದಿಕೆಯಲ್ಲೇ ಬಿದ್ದ ನಟ ಶಾಹಿದ್ ಕಪೂರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
 
ಗೋವಾದಲ್ಲಿ 54ನೇ ‘ಇಂಟರ್​ನ್ಯಾಷನಲ್​ ಫಿಲ್ಮ್​ ಫೆಸ್ಟಿವಲ್​ ಆಫ್​ ಇಂಡಿಯಾ 2023’ ಸಂಭ್ರಮದಿಂದ ನಡೆಯುತ್ತಿದ್ದು, ಚಲನಚಿತ್ರೋತ್ಸವದಲ್ಲಿ ಭಾರತೀಯ ಚಿತ್ರರಂಗದ ನಟ ನಟಿಯರು ಭಾಗವಹಿಸಿ ನೃತ್ಯ ಪ್ರದರ್ಶನ ನೀಡುತ್ತಿದ್ದಾರೆ.

ಬಾಲಿವುಡ್ ನಟ ಶಾಹಿದ್ ಕಪೂರ್ ಅದ್ಭುತ ನೃತ್ಯ ಪ್ರದರ್ಶಿಸಿದ್ದು, ಈ ವೇಳೆ ವೇದಿಕೆಯಲ್ಲಿ ಕುಸಿದಿದ್ದು, ಆ ಕೂಡಲೇ ನಗುಮೊಗದಿಂದ ತಮ್ಮ ನೃತ್ಯ ಮುಂದುವರಿಸಿದ್ದಾರೆ.

ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​ ಎಕ್ಸ್​​​​​ನಲ್ಲಿ ಹಂಚಿಕೊಳ್ಳಲಾದ ವಿಡಿಯೋವೊಂದರಲ್ಲಿ ಬಾಲಿವುಡ್​ ನಟ ಶಾಹಿದ್ ಕಪುರ್​ ಅವರು ಸಹ ನೃತ್ಯಗಾರರ ಗುಂಪಿನೊಂದಿಗೆ ಡ್ಯಾನ್ಸ್ ಮಾಡುತ್ತಿದ್ದ ವೇಳೆ ಅನಿರೀಕ್ಷಿತವಾಗಿ ಸಮತೋಲನ ಕಳೆದುಕೊಂಡು ವೇದಿಕೆಯಲ್ಲೇ ಬಿದ್ದಿದ್ದಾರೆ. ಅದಾಗ್ಯೂ, ಯಾವುದೇ ಮುಜುಗರ, ಹಿಂಜರಿಕೆಯಿಲ್ಲದೇ ವೇಗವಾಗಿ ಎದ್ದು ತಮ್ಮ ಪವರ್​ಫುಲ್​ ಡ್ಯಾನ್ಸ್ ಮುಂದುವರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!