ಡ್ರಗ್ಸ್‌ ಸೇವನೆ, ಬಾಲಿವುಡ್‌ ನಟಿ ಶ್ರದ್ಧಾ ಕಪೂರ್‌ ಸಹೋದರನ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಾರ್ಟಿಯೊಂದರಲ್ಲಿ ಡ್ರಗ್ಸ್ ಸೇವಿಸಿದ ಆರೋಪದಡಿ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಸಹೋದರ ಸಿದ್ದಾಂತ್ ಕಪೂರ್‌ನನ್ನು ಬೆಂಗಳೂರು ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ಭಾನುವಾರ ರಾತ್ರಿ ನಗರದ ಎಂ.ಜಿ.ರಸ್ತೆಯಲ್ಲಿ ಪಾರ್ಟಿ ಆಯೋಜಿಸಿದ್ದ ಹೋಟೆಲ್ ಮೇಲೆ ದಾಳಿ ನಡೆಸಿದ್ದಾರೆ.

ಈ ವೇಳೆ ಮಾದಕ ದ್ರವ್ಯ ಸೇವಿಸಿರುವ ಶಂಕಿತ ಜನರ ಮಾದರಿಗಳನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರು ಮಂದಿಯಲ್ಲಿ ಸಿದ್ದಾಂತ್ ಮಾದರಿ ಪಾಸಿಟಿವ್ ಬಂದಿದೆ ಎಂದು ಬೆಂಗಳೂರು ನಗರ ಉಪಪೊಲೀಸ್ ಆಯುಕ್ತ (ಪೂರ್ವ) ಭೀಮಾಶಂಕರ್ ಎಸ್ ಗುಳೇದ್ ಸೋಮವಾರ ತಿಳಿಸಿದ್ದಾರೆ.

ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅವರ ಸಹೋದರ ರಕ್ತದ ಮಾದರಿಯಲ್ಲಿ ಪಾಸಿಟಿವ್‌ ಬಂದಿದೆ. ಡ್ರಗ್ಸ್ ಸೇವಿಸಿದ ಆರು ಜನರಲ್ಲಿ ಸಿದ್ಧಾಂತ್‌ ಕೂಡ ಒಬ್ಬರು. ಹಾಗಾಗಿ ಅವರನ್ನು ರಾತ್ರಿ ಬಂಧನ ಮಾಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಅವರು ಹೋಟೆಲ್‌ನಲ್ಲಿ ಡ್ರಗ್ಸ್ ಸೇವಿಸಿದ್ದಾರೋ ಅಥವಾ ಹೊರಗೆ ಡ್ರಗ್ಸ್ ಸೇವಿಸಿ ಪಾರ್ಟಿಗೆ ಬಂದಿದ್ದಾರೋ ಎಂಬುದು ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!