ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಸಿದ್ಧಾರ್ಥ್-ಅದಿತಿ ರಾವ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟರಾದ ಸಿದ್ಧಾರ್ಥ್ ಮತ್ತು ಅದಿತಿ ರಾವ್ ಹೈದರಿ ಅವರು ತೆಲಂಗಾಣದ ವನಪರ್ತಿ ಜಿಲ್ಲೆಯ ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ ದೇವಾಲಯದ ಮಂಟಪದಲ್ಲಿ ಬುಧವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ವಧು ಮತ್ತು ವರನ ಸ್ನೇಹಿತರು ಮತ್ತು ಕುಟುಂಬಗಳ ಸಮ್ಮುಖದಲ್ಲಿ ಮದುವೆ ನಡೆಯಿತು ಎಂದು ವರದಿಗಳು ತಿಳಿಸಿವೆ.
2021ರ ತಮಿಳು-ತೆಲುಗು ದ್ವಿಭಾಷಾ ಚಿತ್ರ ‘ಮಹಾ ಸಮುದ್ರಂ’ ಸೆಟ್‌ನಲ್ಲಿ ಸಿದ್ಧಾರ್ಥ್ ಮತ್ತು ಅದಿತಿ ಭೇಟಿಯಾದರು. ಅಂದಿನಿಂದ ಇಬ್ಬರೂ ಹಲವಾರು ಬಾರಿ ಜಂಟಿಯಾಗಿ ಕಾಣಿಸಿಕೊಂಡಿದ್ದಾರೆ.

ಅದಿತಿ ರಾವ್ ಹೈದರಿ ಮಲಯಾಳಂ ಚಿತ್ರ ಪ್ರಜಾಪತಿಯೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಮರ್ಡರ್ 3, ರಾಕ್ಸ್ಟಾರ್ ಸೇರಿದಂತೆ ಹಲವಾರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದು ನಟ ನಟಿಯರಿಬ್ಬರಿಗೂ ಎರಡನೇ ವಿವಾಹವಾಗಿದೆ. ಈ ಹಿಂದೆ ನಟಿ ಅದಿತಿ ತಮ್ಮ 21ನೇ ವಯಸ್ಸಿನಲ್ಲೇ ‘ನೋ ಒನ್ ಕಿಲ್ಡ್ ಜೆಸ್ಸಿಕ’ ಖ್ಯಾತಿಯ ಸತ್ಯದೀಪ್ ಮಿಶ್ರಾ ಅವರನ್ನು ವಿವಾಹವಾಗಿದ್ದರು. ಆದರೆ ಇದನ್ನು ಗುಟ್ಟಾಗಿಟ್ಟಿದ್ದರು.

2013ರಲ್ಲಿ ತಾವು ಸತ್ಯದೀಪ್‌ರಿಂದ ವಿಚ್ಚೇದನ ಪಡೆದಿರುವುದಾಗಿ ನಟಿ ಘೋಷಿಸಿದ್ದರು. ಇನ್ನು, ತಮಿಳು ನಟ ಸಿದ್ಧಾರ್ಥ್ 2003ರಲ್ಲಿ ಅವರು ಮೇಘನಾ ಎಂಬ ಯುವತಿಯೊಂದಿಗೆ ವಿವಾಹವಾಗಿದ್ದರು ಮತ್ತು 2006ರಲ್ಲಿ ಜೋಡಿ ಬೇರ್ಪಡೆಯಾಗಿತ್ತು. 2007ರಲ್ಲಿ ವಿಚ್ಚೇದನ ಪಡೆದಿದ್ದರು.

ಇದುವರೆಗೂ ಈ ಜೋಡಿಯು ಡೇಟಿಂಗ್ ನಡೆಸುತ್ತಿದ್ದುದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇ ಇದ್ದರು ಅವರದನ್ನು ಅಧಿಕೃತವಾಗಿ ಒಪ್ಪಿರಲಿಲ್ಲ. ಮಾ.27ರಂದು ಇವರು ತಮ್ಮ ಕೆಲವೇ ಗೆಳೆಯರು ಮತ್ತು ಕುಟುಂಬದ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!