ಥಿಯೇಟರ್‌ ನಲ್ಲಿ ನಟನಿಗೆ ಮಹಿಳೆಯಿಂದ ಕಪಾಳಮೋಕ್ಷ: ಕಾರಣವೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಹೈದರಾಬಾದ್‌ನ ಥಿಯೇಟರ್‌ ನಲ್ಲಿ ಕನ್ನಡದ ನಟನಿಗೆ ಮಹಿಳೆಯಿಂದ ಕಪಾಳಮೋಕ್ಷ ಆಗಿರುವ ಘಟನೆಯೊಂದು ನಡೆದಿದೆ.

ತೆಲುಗಿನ ‘ಲವ್ ರೆಡ್ಡಿ’ ಎಂಬ ಸಿನಿಮಾದಲ್ಲಿ ನಟಿಸಿದ್ದ ಕನ್ನಡದ ನಟ ಎನ್‌ಟಿ ರಾಮಸ್ವಾಮಿ ಹಲ್ಲೆ ನಡೆಸಿದ ಘಟನೆ ಹೈದರಾಬಾದ್‌ನ ನಿಜಾಂಪೇಟ್‌ನಲ್ಲಿರುವ ಜಿಪಿಆರ್ ಮಾಲ್‌ನಲ್ಲಿ ನಡೆದಿದೆ.

ಥಿಯೇಟರ್‌ನಲ್ಲಿ ಸಿನಿಮಾ ನೋಡುವಾಗ ಕ್ಲೈಮ್ಯಾಕ್ಸ್ ಸೀನ್ ನೋಡಿ ನಂತರ ಮಹಿಳೆ ಭಾವುಕರಾಗಿದ್ದರು. ಇದೇ ವೇಳೆ, ಚಿತ್ರತಂಡ ವೇದಿಕೆ ಹತ್ತಿದೆ. ಮಹಿಳೆಯೊಬ್ಬರು ಕೋಪದಿಂದ ಅಲ್ಲಿಗೆ ಹೋಗಿ ನಾಯಕಿಯ ತಂದೆ ಪಾತ್ರಧಾರಿ ರಾಮಸ್ವಾಮಿ ಕೆನ್ನೆಗೆ ಬಾರಿಸಿದ್ದಾರೆ. ಚಿತ್ರದಲ್ಲಿ ನಾಯಕ-ನಾಯಕಿಯನ್ನು ರಾಮಸ್ವಾಮಿ ದೂರ ಮಾಡಿದ್ದಕ್ಕೆ ಮಹಿಳೆ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

https://x.com/rameshpammy/status/1849487086128140689?ref_src=twsrc%5Etfw%7Ctwcamp%5Etweetembed%7Ctwterm%5E1849487086128140689%7Ctwgr%5E211864e39379c8bc6a7f147073f8c6062681e0d4%7Ctwcon%5Es1_&ref_url=https%3A%2F%2Fpublictv.in%2Fwoman-slaps-kannada-actor-nt-ramaswamy-over-his-on-screen-portrayal-in-love-reddy-film%2F

ತಕ್ಷಣ ಅಲ್ಲಿದ್ದ ಸಹ ಕಲಾವಿದರು ಮಹಿಳೆಯಿಂದ ರಾಮಿಸ್ವಾಮಿ ಅವರನ್ನು ರಕ್ಷಿಸಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಅಂದಹಾಗೆ, ‘ಲವ್ ರೆಡ್ಡಿ’ ಸಿನಿಮಾ ಅಕ್ಟೋಬರ್ 18ರಂದು ರಿಲೀಸ್ ಆಗಿತ್ತು. ಅಂಜನ್ ರಾಮಚಂದ್ರ, ಶ್ರಾವಣಿ ಜೋಡಿಯಾಗಿ ನಟಿಸಿದ್ದರು. ಈ ಚಿತ್ರಕ್ಕೆ ಸ್ಮರಣ ರೆಡ್ಡಿ ನಿರ್ದೇಶನ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!