ಶೂಟಿಂಗ್‌ ಸೆಟ್‌ನಲ್ಲಿ ನಟ ಸೂರ್ಯಗೆ ಗಾಯ, ಆಸ್ಪತ್ರೆಗೆ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತಮಿಳಿನ ಖ್ಯಾತ ನಟ ಸೂರ್ಯಗೆ ಶೂಟಿಂಗ್‌ ಸೆಟ್‌ನಲ್ಲಿ ಗಾಯ ಆಗಿದೆ. ‘ಸೂರ್ಯ 44’ ಸಿನಿಮಾದ ಶೂಟ್​ನಲ್ಲಿ ಬ್ಯುಸಿ ಇದ್ದರು. ಪೆಟ್ಟಾಗಿರೋ ಕಾರಣದಿಂದ ಸಿನಿಮಾದ ಶೂಟ್​ನ ಅರ್ಧಕ್ಕೆ ನಿಲ್ಲಿಸಲಾಗಿದೆ ಎಂದು ವರದಿ ಆಗಿದೆ.

ಈ ತಿಂಗಳ ಆರಂಭದಲ್ಲಿ ಊಟಿಯಲ್ಲಿ ‘ಸೂರ್ಯ 44’ ಚಿತ್ರದ ಕೆಲಸ ಆರಂಭ ಆಗಿತ್ತು. ಈಗ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಈ ಚಿತ್ರವನ್ನು ಕಾರ್ತಿಕ್ ಸುಬ್ಬರಾಜು ಅವರು ನಿರ್ದೇಶನ ಮಾಡುತ್ತಿದ್ದಾರೆ.

ಸದ್ಯ ಈಗ ಸೂರ್ಯ ಚೇತರಿಕೆಕಂಡಿದ್ದಾರೆ. ಈ ಬಗ್ಗೆ ನಿರ್ಮಾಪಕ ರಾಜಶೇಖರ್ ಪಾಂಡಿಯನ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಪ್ರೀತಿಯ ಸೂರ್ಯ ಅಭಿಮಾನಿಗಳೇ, ಇದೊಂದು ಸಣ್ಣ ಗಾಯ. ಭಯ ಬೇಡ. ನಿಮ್ಮ ಪ್ರಾರ್ಥನೆ ಹಾಗೂ ಪ್ರೀತಿಯಿಂದ ಸೂರ್ಯ ಅಣ್ಣ ಅವರು ಆರಾಮಾಗಿ ಇದ್ದಾರೆ ಎಂದಿದ್ದಾರೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!