ಪಂಚಭೂತಗಳಲ್ಲಿ ಲೀನವಾದ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಬೆಂಗಳೂರಿನ ಶ್ರೀರಾಂಪುರದ ಹರೀಶ್ಚಂದ್ರ ಘಾಟ್ ನಲ್ಲಿ ಪಂಚಭೂತಗಳಲ್ಲಿ ಲೀನವಾದರು.

ಶ್ರೀರಾಮಪುರದ ಹರೀಶ್ಚಂದ್ರ ಘಾಟ್ ವರೆಗೆ ಸ್ಪಂದನ ಅವರ ಅಂತಿಮ ಯಾತ್ರೆ ಆಗಮಿಸಿದ ನಂತರ ಈ ವೇಳೆ ಪುತ್ರ ಶೌರ್ಯ ವಿಧಿ ವಿಧಾನಗಳ ನೆರೆವೇರಿಸಿದನು.

ಈಡಿಗ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನ ನಡೆಸಿ ನಂತರ ವಿದ್ಯುತ್ ಚಿತಾಗರದತ್ತ ಅವರ ದೇಹವನ್ನು ತೆಗೆದುಕೊಂಡು ಹೋದರು.
ಈ ಸಂದರ್ಭಕುಟುಂಬಸ್ಥರು ಹಾಗೂ ಸಂಬಂಧಿಕರು ಅಂತಿಮವಾಗಿ ದರುಶನ ಪಡೆದರು. ಬಳಿಕ ವಿಜಯರಾಘವೇಂದ್ರ ಹಾಗೂ ಪುತ್ರ ಶೌರ್ಯ ಮೃತ ದೇಹಕ್ಕೆ ಅಗ್ನಿಸ್ಪರ್ಶ ನೀಡಿದರು.

ತಂದೆ ಶಿವರಾಂ, ಚಿಕ್ಕಪ್ಪ ಬಿಕೆ ಹರಿಪ್ರಸಾದ್, ಮಾವ ಚಿನ್ನೇಗೌಡರು,ಮೈದುನ ಶ್ರೀ ಮುರಳಿ ಕುಟುಂಬದ ಸದಸ್ಯರು ಜೊತೆಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!