ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ಸದಾ ಒಂದಲ್ಲಾ ಒಂದು ವಿಚಾರ ಸುದ್ದಿಯಲ್ಲಿರುತ್ತಾರೆ. ಕೆಲವು ದಿನಗಳ ಹಿಂದೆ ಮೊದಲ ಸಿನಿಮಾದ ನಿರ್ಮಾಣ ಸಂಸ್ಥೆಯ ಹೆಸರು ಹೇಳದೇ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಕಾಲಿವುಡ್‌ನ ಸ್ಟಾರ್ ನಟ ವಿಶಾಲ್‌ಗೆ (Vishal) ರಶ್ಮಿಕಾ ಜೊತೆ ಡೇಟಿಂಗ್ ಮಾಡುವ ಆಸೆಯಂತೆ.
ಸೌತ್ ನಟ ವಿಶಾಲ್ ಸದ್ಯ `ಲಾಠಿ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ನಟ ವಿಶಾಲ್ ರಶ್ಮಿಕಾ ಜೊತೆ ಸೆಲೆಬ್ರೆಟಿ ಡೇಟ್ ಹೋಗಬೇಕು ಎಂದಿದ್ದಾರೆ.
ಇನ್ನೂ ಸದ್ಯದಲ್ಲೇ ಮದುವೆ ಆಗುವುದಾಗಿ ಹೇಳಿಕೊಂಡಿದ್ದರು. ಒಪ್ಪಿಕೊಂಡಿರುವ ಸಿನಿಮಾ, ಜೊತೆ ಕಟ್ಟಡ ನಿರ್ಮಾಣ ಕಾರ್ಯ ಮುಗಿಯೋಕು ಗುಡ್ ನ್ಯೂಸ್ ಕೊಡುವುದಾಗಿ ವಿಶಾಲ್ ತಿಳಿಸಿದ್ದಾರೆ.