August 14, 2026
Friday, August 14, 2026
spot_img

Aap ki Adalath ಕಾರ್ಯಕ್ರಮದಲ್ಲಿ ಮಿಂಚಿದ ನಟ ಯಶ್‌, ಪ್ರೋಮೋ ರಿಲೀಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸದ್ಯ ಟಾಕ್ಸಿಕ್‌ ಸಿನಿಮಾ ಪ್ರಮೋಷನ್ಸ್‌ನಲ್ಲಿ ಬ್ಯುಸಿಯಾಗಿರುವ ನಟ ಯಶ್‌ ಭಾರತದ ಅತ್ಯಂತ ಜನಪ್ರಿಯ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದಾರೆ.

ರಜತ್‌ ಶರ್ಮಾ ಅವರ ಜನಪ್ರಿಯ ಕಾರ್ಯಕ್ರಮವಾದ ʼಆಪ್‌ ಕಿ ಅದಾಲತ್‌ʼನಲ್ಲಿ ಯಶ್‌ ಕಾಣಿಸಿಕೊಂಡಿದ್ದು, ಕಾರ್ಯಕ್ರಮದ ಪ್ರೋಮೋ ರಿಲೀಸ್‌ ಆಗಿದೆ. ಬಾಲಿವುಡ್‌ನ ದಿಗ್ಗಜ ಸೆಲೆಬ್ರಿಟಿಗಳು ಈ ಕಾರ್ಯಕ್ರಮದ ಅತಿಥಿಗಳಾಗುತ್ತಾರೆ. ಈ ಸಾಲಿನಲ್ಲಿ ನಮ್ಮ ಕನ್ನಡದ ನಟ ಯಶ್‌ ಕೂಡ ಸೇರಿಕೊಂಡಿದ್ದಾರೆ.

ಕರ್ನಾಟಕದಿಂದ ಆಪ್‌ ಕಿ ಅದಾಲತ್‌ ಕುರ್ಚಿಯಲ್ಲಿ ಕುಳಿತ ಮೊದಲ ಸ್ಟಾರ್‌ ಎನ್ನುವ ಖ್ಯಾತಿಗೆ ಯಶ್‌ ಪಾತ್ರರಾಗಿದ್ದಾರೆ. ಪ್ರೋಮೋದಲ್ಲಿ ಯಶ್‌ ಶಾರುಖ್‌ ಖಾನ್‌ ಬಗ್ಗೆ ಮಾತನಾಡಿರುವ ದೃಶ್ಯಾವಳಿಗಳಿದೆ.

ಪ್ರೋಮೋದಲ್ಲಿ ಏನಿದೆ?

ನೀವು ಯಾವಾಗಲೂ ಶಾರುಖ್‌ ಅಭಿಮಾನಿಯಾಗಿದ್ದಿರಿ ಎಂದು ಕೇಳಿದ್ದೇವೆ. ಆದರೆ ಶಾರುಖ್‌ ಖಾನ್‌ರನ್ನು ಭೇಟಿಯಾಗೋಕೆ ಆಗಿಲ್ಲ ಎನ್ನುವ ಸಿಟ್ಟಿನಿಂದ ಶಾರುಖ್‌ ನಟನೆಯ ʼಝೀರೋʼ ರಿಲೀಸ್‌ ಆಗುವ ದಿನವೇ ʼಕೆಜಿಎಫ್‌ʼನ್ನು ರಿಲೀಸ್‌ ಮಾಡಿದ್ರಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಯಶ್‌ ನಾನು ಈಗಲೂ ಅವರ ಅಭಿಮಾನಿ ಸರ್‌. ಅಂದು ಎರಡು ಸಿನಿಮಾ ರಿಲೀಸ್‌ ಆಗಿತ್ತು. ಒಂದು ದೊಡ್ಡವರ ದೊಡ್ಡ ಸಿನಿಮಾ, ನಮ್ಮದು ಸಣ್ಣ ಸಿನಿಮಾ ಎಂದಿದ್ದಾರೆ. ಅದಕ್ಕೆ ರಜತ್‌ ಶರ್ಮಾ, ನಿಮ್ಮ ಸಿನಿಮಾ ಝೀರೋ ಸಿನಿಮಾಗಿಂತ ಹೆಚ್ಚು ಕಮಾಯಿ ಮಾಡಿದೆ ಎಂದು ನಕ್ಕಿದ್ದಾರೆ. ಅದಕ್ಕೆ ಯಶ್‌ ಸೀನಿಯರ್‌ಗಳಿಗಿಂತ ನಾನು ಬೆಟರ್‌ ಎಂದು ಯಾವತ್ತು ಅಂದುಕೊಳ್ತೀನೋ ಅವತ್ತು ಸಿನಿಮಾ ಇಂಡಸ್ಟ್ರಿಯಲ್ಲಿ ನನ್ನ ಪಯಣ ಮುಗಿಯುತ್ತದೆ ಎಂದಿದ್ದಾರೆ.

700 ಅಭಿಮಾನಿಗಳಿಗೆ ಸೆಲ್ಫಿ

ಯಶ್‌ ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಏಳುನೂರಕ್ಕೂ ಅಧಿಕ ಫ್ಯಾನ್ಸ್‌ ಜೊತೆ ಬೆಳಗ್ಗೆಯಿಂದ ಸಂಜೆಯವರೆಗೂ ಸೆಲ್ಫಿ ತೆಗೆಸಿಕೊಂಡಿದ್ದು ನಿಜವಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಯಶ್‌ ಹೌದು, ಬೆಳಗ್ಗೆಯಿಂದ ಸಂಜೆಯವರೆಗೂ ಜನರಿಗೆ ಸೆಲ್ಫಿ ತೆಗೆದುಕೊಳ್ಳಲು ಅವಕಾಶ ಕೊಟ್ಟಿದ್ದೆ. ನನ್ನ ಜೊತೆ ತೆಗೆಸಿಕೊಳ್ಳುವ ಒಂದು ಫೋಟೊ ಅವರಿಗೆ ತಿಂಗಳುಗಟ್ಟಲೆ ಖುಷಿ ನೀಡುತ್ತದೆ. ಬೇರೆಯವರ ಖುಷಿ ಕಿತ್ತುಕೊಳ್ಳಲು ನಾನ್ಯಾರು ಎಂದಿದ್ದಾರೆ. ಅಂತೆಯೇ ಅಲ್ಲೇ ಕುಳಿತಿದ್ದ ಅಭಿಮಾನಿಯೊಬ್ಬರು ಇಂದು ಕೂಡ ನಮ್ಮ ಜೊತೆ ಫೋಟೊ ತೆಗೆಸಿಕೊಳ್ತೀರಾ? ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಯಶ್‌ ಒಕೆ ಎಂದಿದ್ದು ಎಲ್ಲರ ಜೊತೆ ಫೋಟೊ ತೆಗೆಸಿಕೊಂಡಿದ್ದಾರೆ.

https://www.instagram.com/reel/Db_g_CAR1Ef/?igsh=dWlwM2o1Mm1mZG1u

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !