ಗಂಗೂಬಾಯಿ ಸಿನಿಮಾದ ಯಶಸ್ಸಿನ ಖುಷಿಯಲ್ಲಿ ಖಾಸಗಿ ಜೀವನ ಬಗ್ಗೆ ಮಾತನಾಡಿದ ನಟಿ ಆಲಿಯಾ ಭಟ್ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗಂಗೂಬಾಯಿ ಕಥಿಯಾವಾಡಿ ಸಿನಿಮಾದ ಯಶಸ್ಸು ಪ್ರದರ್ಶನದಿಂದ ಖುಷಿಯಲ್ಲಿ ಇರುವ ಬಾಲಿವುಡ್​ ನಟಿ ಆಲಿಯಾ ಭಟ್ ಇದೀಗ ತಮ್ಮ ಖಾಸಗಿ ಜೀವನ ಬಗ್ಗೆ ಮಾತನಾಡಿದ್ದಾರೆ.
ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿದ ಅವರು, ಸೆಲೆಬ್ರಿಟಿಗಳ ಜೀವನದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಜನರು ಬಯಸುತ್ತಾರೆ. ನನ್ನ ಜೀವನದಲ್ಲಿ ಸಾರ್ವಜನಿಕ ಹಿತಾಸಕ್ತಿಯನ್ನು ನೆನೆಪಿಸಿಕೊಂಡರೆ ನನಗೆ ಉಸಿರುಗಟ್ಟುವಂತಾಗುತ್ತದೆ. ಹಾಗಾಗಿನಾನು ಯಾವಾಗ ಮದುವೆಯಾಗುತ್ತೇನೆ ಎಂಬ ವಿವರಗಳನ್ನು ನೀಡಲು ನನ್ನಿಂದ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಯಾವುದೇ ವ್ಯಕ್ತಿಗೂ ಸಾರ್ವಜನಿಕ ವ್ಯಕ್ತಿಯಾಗಿರುವುದು ಸುಲಭವಲ್ಲ. ನಾವುಸಾರ್ವಜನಿಕ ವ್ಯಕ್ತಿಯಾಗಲು ಬಯಸಿದರೆ ನಮ್ಮಜೀವನವು ಸಹ ಸಾರ್ವಜನಿಕವಾಗುತ್ತದೆ. ಅದಕ್ಕಾಗಿಯೇ ನಾನಷ್ಟೇ ಅಲ್ಲ, ಪ್ರತಿಯೊಬ್ಬ ವ್ಯಕ್ತಿ ವೈಯಕ್ತಿಕ ಜೀವನವನ್ನು ರಕ್ಷಿಸಲು ಪ್ರಯತ್ನಿಸುತ್ತಿರುತ್ತಾನೆ. ಇದೇ ರೀತಿ ನಾನು ಸಹ ನನ್ನ ಖಾಸಗಿ ಜೀವನವನ್ನು ಕಾಪಾಡಲು ಇಷ್ಟಪಡುತ್ತೇನೆ ಎಂದಿದ್ದಾರೆ.
ಎಲ್ಲರಿಗೂ ನಾನು ನಾನು ಯಾವಾಗ ಮದುವೆಯಾಗುತ್ತೇನೆ ಎಂಬ ಕುತೂಹಲ ಇದೆ. ಆದರೆ ಆ ವಿವರಗಳನ್ನು ನೀಡಲು ಆಗುವುದಿಲ್ಲ. ಇದನ್ನೇ ದೊಡ್ಡದಾಗಿ ಮಾಡಲು ನನ್ನಿಂದ ಸಾಧ್ಯವಿಲ್ಲ ಎಂದು ಹೇಳುವ ಮೂಲಕ ತಮ್ಮ ಪ್ರೀತಿಯ ಗುಟ್ಟನ್ನು ಹೇಳಿದ್ದಾರೆ.
ನನ್ನ ತಂದೆ ನಿರ್ಮಾಪಕ ಆಗಿರಬಹುದು. ಆದರೆ, ನಾನೀಗ ಓರ್ವ ನಟಿಯಾಗಿ ಹೊರಹೊಮ್ಮಿದ್ದೇನೆ. ಆರಂಭದಲ್ಲಿದ್ದ ಅಳುಕು ಈಗ ನನಲ್ಲಿ ಇಲ್ಲ. ನನ್ನ ತಲೆಯ ಮೇಲೆ ಈಗ ಯಾವುದೇ ಒತ್ತಡವಿಲ್ಲ. ಇದೀಗ ನನ್ನ ಮುಂದೆ ಇರುವುದು ಪ್ರತಿ ಸಿನಿಮಾ ವಿಭಿನ್ನತೆಯಿಂದ ಕೂಡಿರಬೇಕು ಅನ್ನೋದು.
ಸದ್ಯ ಆಲಿಯಾ ಅವರ ಕೈಯಲ್ಲಿ ಸದ್ಯ ಹಲವು ಚಿತ್ರಗಳಿದ್ದು, ಇತ್ತೀಚೆಗೆ ಬಿಡುಗಡೆಯಾದ ಗಂಗೂಬಾಯಿ ಅವರ ಜೀವನಚರಿತ್ರೆಯಾಧಾರಿತ ಗಂಗೂಬಾಯಿ ಕಥಿಯಾವಾಡಿ ಚಿತ್ರವು ಬಾಕ್ಸ್​ ಆಫೀಸ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲಿಯೇ 38.5 ಕೋಟಿ ಗಳಿಸಿ ದಾಖಲೆ ಬರೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!