ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್, ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಸಿನಿಮಾದಲ್ಲಿ ನಟಿಸಿರುವ ಅದಾ ಶರ್ಮಾಗೆ ಬಿಗ್ ಬ್ರೇಕ್ ನೀಡಿದ್ದು, ದಿ ಕೇರಳ ಸ್ಟೋರಿ.
ಹೌದು ಈ ಸಿನಿಮಾದಿಂದ ಅದಾಗೆ ಎಷ್ಟು ಹೆಸರು ಬಂದಿದ್ಯೋ ಅಷ್ಟೇ ಬೆದರಿಕೆ ಕರೆಗಳೂ ಬಂದಿವೆ. ನಟಿ ವಿರುದ್ಧ ಕೆಟ್ಟ ಪೋಸ್ಟ್‌ಗಳನ್ನು ಮಾಡಿದ್ದ ಕಿಡಿಗೇಡಿಗಳು ಇದೀಗ ಅದಾ ಶರ್ಮಾ ಪರ್ಸನಲ್ ಫೋನ್ ನಂಬರ್ ಲೀಕ್ ಮಾಡಿದ್ದಾರೆ.
ಇದರಿಂದಾಗಿ ಸಾಕಷ್ಟು ಅಪರಿಚಿತರಿಂದ ಕರೆ, ಮೆಸೇಜ್ ಹಾಗೂ ಕೊಲೆ ಬೆದರಿಕೆಗಳು ಬರುತ್ತಿವೆಯಂತೆ. ಈ ಹಿಂದೆಯೇ ಸಾಕಷ್ಟು ಕೊಲೆ ಬೆದರಿಕೆ ಬಂದಿದ್ದು, ಅದಾ ಶರ್ಮಾಗೆ ಪೊಲೀಸ್ ಭದ್ರತೆ ನೀಡಲಾಗಿತ್ತು. ಇದೇ ಸಿನಿಮಾದಲ್ಲಿ ಮುಸ್ಲಿಂ ಪಾತ್ರ ಮಾಡಿದ ಸೋನಿಯಾ ಬಾಲಾನಿಗೂ ಪೊಲೀಸ್ ಭದ್ರತೆ ನೀಡಲಾಗಿದೆ.