ಹಳದಿಯಲ್ಲಿ ಮಿಂದೆದ್ದ ಅದಿತಿ ಪ್ರಭುದೇವ, ಅರಿಶಿಣ ಶಾಸ್ತ್ರದ ಫೋಟೊ ಹಂಚಿಕೊಂಡ ನಟಿ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡದ ಬಹುಬೇಡಿಕೆಯ ನಟಿ ಅದಿತಿ ಪ್ರಭುದೇವಗೆ ಅರಿಶಿಣ ಶಾಸ್ತ್ರದ ಸಂಭ್ರಮ.

ಈ ಫೋಟೋಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ನಟಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ.ದಾಂಪತ್ಯಕ್ಕೆ ಕಾಲಿಡಲು ಅದಿತಿ ತಯಾರಾಗಿದ್ದು, ಅರಿಶಿಣ ಶಾಸ್ತ್ರದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಯಶಸ್ವಿ (ಯಶಸ್) ಜೊತೆ ಅವರು ಹಸೆಮಣೆ ಏರುತ್ತಿದ್ದಾರೆ. ಇವರ ಮದುವೆ ಭಾನುವಾರ (ನವೆಂಬರ್​ 27) ಬೆಂಗಳೂರಿನ ಪ್ಯಾಲೇಸ್​ ಗ್ರೌಂಡ್​ನಲ್ಲಿ ನಡೆಯಲಿದೆ. ಯಶಸ್ವಿ ಜೊತೆ ಇಂದು ಹಸೆಮಣೆ ಏರುತ್ತಿರುವ ಅದಿತಿ, ಪ್ಯಾಲೇಸ್ ಗ್ರೌಂಡ್‌ನಲ್ಲಿ ಅದ್ಧೂರಿ ವಿವಾಹ ಆಚರಿಸಿಕೊಳ್ಳುತ್ತಿದ್ದಾರೆ.

ಕನ್ನಡದ ಬಹುಬೇಡಿಕೆಯ ನಟಿಯರಲ್ಲಿ ಅದಿತಿ ಪ್ರಭುದೇವ ಕೂಡ ಗುರುತಿಸಿಕೊಂಡಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿ ಜನಮನ ಗೆದ್ದಿರುವ ಅವರು ಈಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!