ಹೊಸದಿಗಂತ ಡಿಜಿಟಲ್ ಡೆಸ್ಕ್
ರಾಜ್ಯದಲ್ಲಿ ಹುಲಿಯ ಉಗುರು ಪ್ರಕರಣ ಸದ್ದು ಮಾಡುತ್ತಿದ್ದು ಸಿನಿ ತಾರೆಯರು ಸೇರಿದಂತೆ ರಾಜಕೀಯ ವ್ಯಕ್ತಿಗಳಿಗೂ ಸಂಕಷ್ಟ ಎದುರಾಗಿದೆ.
ಇದೀಗ ನಟಿ ಅಮೂಲ್ಯ ಅವರಿಗೂ ಹುಲಿ ಉಗುರು ಸಂಕಷ್ಟ ಎದುರಾಗಿದ್ದು , ಅವರ ಮಕ್ಕಳ ಕೊರಳಲ್ಲಿ ಹುಲಿಯ ಉಗುರಿನ ಪೆಂಡೆಂಟ್ ಇರುವ ಫೋಟೋ ವೈರಲ್ ಆಗಿದೆ.
ಅಮೂಲ್ಯ ಪತಿ ಹಾಗೂ ಅವಳಿ ಮಕ್ಕಳ ಕೊರಳಲ್ಲಿ ಹುಲಿ ಉಗುರು ಪೆಂಡೆಂಟ್ ಕಂಡುಬಂದಿದ್ದು, ಕಾರ್ಯಕ್ರಮದಲ್ಲಿ ತೆಗೆಸಿಕೊಂಡಿದ್ದ ಫೋಟೋಗಳಲ್ಲಿ ಹುಲಿ ಉಗುರು ಪೆಂಡೆಂಟ್ ಕಂಡು ಬಂದಿದೆ.ನಟಿ ಅಮೂಲ್ಯ ಪತಿ ಹಾಗೂ ಅವಳಿ ಮಕ್ಕಳು ತೆಗೆಸಿಕೊಂಡಿದ್ದ ಫೋಟೋಗಳು ವೈರಲ್ ಆಗಿದ್ದು, ಹುಲಿ ಉಗುರು ಪೆಂಡೆಂಟ್ ಅಸಲಿ ಅಲ್ಲ ಸಿಂಥೆಟಿಕ್ ಎಂದು ನಟಿ ಅಮೂಲ್ಯ ಸ್ಪಷ್ಟನೆ ನೀಡಿದ್ದಾರೆ.
ಮಕ್ಕಳಿಗೆ ನನ್ನ ಅಮ್ಮ ಏನಾದರೂ ಕೊಡಬೇಕಿತ್ತು, ಅವರು ಸರಗಳನ್ನು ನೀಡಿದರು. ಆದರೆ ಆ ಡಿಸೈನ್ ಅನ್ನು ನಾನೇ ಸೆಲೆಕ್ಟ್ ಮಾಡಿದ್ದೆ. ನಾನು ಹಿಂದೆ ಎಲ್ಲಿಯೋ ಆ ಡಿಸೈನ್ ನೋಡಿ ಫೋಟೊ ತೆಗೆದುಕೊಂಡು ಇಟ್ಟುಕೊಂಡಿದ್ದೆ. ಬಳಿಕ ಅದೇ ಮಾದರಿಯ ಸರಗಳನ್ನು ಮಾಡಿಸಿದೆವು. ಅಂಗಡಿಯಿಂದ ಬಿಲ್ ಬಂದಾಗಲೇ ನನಗೆ ಅದು ಸಿಂಥೆಟಿಕ್ ಎಂದು ಗೊತ್ತಾಗಿದ್ದು. ಅದಕ್ಕೆ ಮುನ್ನ ಅದು ಹುಲಿಯದ್ದೇ ಉಗುರಿರಬಹುದು ಎಂದುಕೊಂಡಿದ್ದೆ ಎಂದು ತಮಾಷೆಯಾಗಿ ಹೇಳಿದ್ದಾರೆ.
ಹಿಂದೆಲ್ಲ ಹುಲಿ ಉಗುರು ಧರಿಸುವುದು ಪೌರುಷದ ಸಂಖೇತದಂತೆ ಭಾವಿಸಲಾಗುತ್ತಿತ್ತು. ಆಗೆಲ್ಲ ಹುಲಿಗಳ ಸಂಖ್ಯೆ ಹೆಚ್ಚಿತ್ತು, ಭೇಟೆ ಆಡುತ್ತಿದ್ದರು. ಆದರೆ ಈಗೆಲ್ಲ ಅದು ಸಾಧ್ಯವಿಲ್ಲ, ಕಾನೂನುಗಳು ಬದಲಾಗಿವೆ. ಹುಲಿ ಉಗುರನ್ನು ಅನಧಿಕೃತವಾಗಿ ಖರೀದಿಸಬೇಕೆಂದರೂ ಲಕ್ಷಾಂತರ ಖರ್ಚಾಗಬಹುದೋ ಏನೋ ಗೊತ್ತಿಲ್ಲ. ನನಗೆ ಅವಳಿ ಮಕ್ಕಳು ನಾನು ಅಲ್ಲಿಗೆ ನಾಲ್ಕು ಉಗುರು ಖರೀದಿಸಬೇಕಾಗುತ್ತದೆ. ಅಷ್ಟೋಂದು ಹಣ ಸಹ ಇಲ್ಲಎಂದು ಹೇಳಿದ್ದಾರೆ.
ಹುಲಿ ಉಗುರಿನ ಸುದ್ದಿ ಹರಿದಾಡಿದಾಗ ನನಗೆ ಆಶ್ಚರ್ಯವಾಯಿತು. ಇದು ಬಹಳ ಸರಳವಾದ ವಿಷಯ ಅಂದುಕೊಂಡಿದ್ದೆವು ಆದರೆ ಅದರ ಗಂಭೀರತೆ ಈಗ ತಿಳಿದು ಬರುತ್ತಿದೆ. ನನ್ನ ಮಕ್ಕಳಿಗೆ ಹಾಕಿದ್ದು ಸಿಂಥೆಟಿಕ್ ಎಂದು ನನಗೆ ಮೊದಲೇ ಗೊತ್ತಿದ್ದ ಕಾರಣ ನನಗೆ ಗಾಬರಿ ಆಗಲಿಲ್ಲ. ಈಗಲೂ ಆ ಸರ ನನ್ನ ಬಳಿ ಇದೆ, ಅಧಿಕಾರಿಗಳು ಬಂದರೆ ಖಂಡಿತ ನೀಡುತ್ತೇನೆ ಎಂದಿದ್ದಾರೆ.