ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಸರಿ 2 ಸಿನಿಮಾದಲ್ಲಿ ನಟನೆ ಮೂಲಕ ಜನರ ಮನಸ್ಸನ್ನು ಗೆದ್ದಿರುವ ನಟಿ ಅನನ್ಯಾ ಪಾಂಡೆ ಇದೀಗ ಸೌತ್ ಕಡೆ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ.
ನಟ ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡೋದು ಎಷ್ಟೊಂದು ನಟಿಯರ ಕನಸು, ಸದ್ಯ ಅಲ್ಲು ಜೊತೆ ಅನನ್ಯಾಗೆ ನಟಿಸೋದಕ್ಕೆ ಚಾನ್ಸ್ ಸಿಕ್ಕಿದೆ ಎನ್ನಲಾಗಿದೆ.
ಅಟ್ಲಿ ಸಿನಿಮಾದಲ್ಲಿ ಅಲ್ಲು ಅರ್ಜುನ್ ತ್ರಿಬಲ್ ರೋಲ್‌ನಲ್ಲಿ ನಟಿಸಲಿದ್ದಾರಂತೆ. ಹಾಗಾಗಿ ಅದರಲ್ಲಿ ಒಂದು ಪಾತ್ರಕ್ಕೆ ಅಲ್ಲು ಅರ್ಜುನ್‌ಗೆ ಜೋಡಿಯಾಗಿ ನಟಿಸಲು ಅನನ್ಯಾ ಅವರನ್ನು ಚಿತ್ರತಂಡ ಸಂಪರ್ಕಿಸಿದೆ ಎನ್ನಲಾಗಿದೆ. ಆದರೆ ಈ ಸಿನಿಮಾದಲ್ಲಿ ನಟಿಸಲು ನಟಿ ಒಪ್ಪಿಕೊಂಡ್ರಾ ಎಂಬುದು ಚಿತ್ರತಂಡದ ಕಡೆಯಿಂದ ಖಾತ್ರಿಯಾಗಬೇಕಿದೆ.