ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಂಕಿ ಪಾಂಡೆ ಪುತ್ರಿ ಹಾಗೂ ಬಾಲಿವುಡ್ ನಟಿ ಅನನ್ಯಾ ಪಾಂಡೆ ಹಾಗು ನಟ ಆದಿತ್ಯ ರಾಯ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಗುಸು ಗುಸು ಈಗ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.
ಅನನ್ಯಾ ಪಾಂಡೆ ಮತ್ತು ಆದಿತ್ಯ ರಾಯ್ ಕಪೂರ್ ಅವರ ಸಂಬಂಧವು ಈಗ ಸ್ನೇಹವನ್ನು ಮೀರಿ ಮುಂದುವರೆದಿದೆ ಮತ್ತು ಹೊಸ ಸಂಬಂಧ ಶುರುವಾಗಿರುವುದರಿಂದ ಇಬ್ಬರೂ ಮುನ್ನೆಚ್ಚರಿಕೆ ವಹಿಸುತ್ತಿದ್ದು ಇದುವರೆಗೂ ಒಟ್ಟಿಗೆ ಕಾಣಿಸಿಕೊಂಡಿಲ್ಲ ಎನ್ನಲಾಗುತ್ತಿದೆ.
ಅನನ್ಯಾ ಪಾಂಡೆ ಅವರು ಈ ಹಿಂದೆ ಶಾಹಿದ್ ಕಪೂರ್ ಅವರ ಕಿರಿಯ ಸಹೋದರ ಇಶಾನ್ ಖಟ್ಟರ್ ಅವರೊಂದಿಗೆ ಸಂಬಂಧ ಹೊಂದಿದ್ದರು ಎನ್ನಲಾಗುತ್ತಿತ್ತು. ಆದರೆ ಅನನ್ಯಾ ಮತ್ತು ಇಶಾನ್ ಸಂಬಂಧ ಮುಂದುವರಿಯಿತು. ವರದಿಗಳ ಪ್ರಕಾರ, ಇಬ್ಬರೂ ಮೂರು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡಿದ್ದಾರೆ.
ಆ ಬಳಿಕ ದಕ್ಷಿಣ ಭಾರತದ ಚಲನಚಿತ್ರ ನಟ ವಿಜಯ್ ದೇವರಕೊಂಡ ಅವರೊಂದಿಗೆ ಅನನ್ಯಾ ನಿಕಟತೆಯ ಬಗ್ಗೆಯ ಸುದ್ದಿ ಸಹ ಹರಿದಾಡಿತ್ತು. ಅನನ್ಯಾ ವಿಜಯ್ ದೇವರ್‌ಕೊಂಡ ಅವರ ಜೊತೆ ಲೈಗರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
ಇದೀಗ ಆದಿತ್ಯ ರಾಯ್ ಕಪೂರ್ ಅವರ ಇತ್ತೀಚಿನ ಬಿಡುಗಡೆ ‘ರಾಷ್ಟ್ರ ಕವಚ ಓಂ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈ ಬಗ್ಗೆ ಆದಿತ್ಯ ಅಥವಾ ಅನನ್ಯಾ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.