ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ ಬಾಸ್ ಖ್ಯಾತಿಯ ಅನುಪಮಾ ಗೌಡ ಇದೀಗ ಹೊಸ ಮನೆಗೆ ಕಾಲಿಟ್ಟಿದ್ದಾರೆ. ಮನೆಗೆ ನಮ್ಮನೆ ಎನ್ನುವ ಹೆಸರಿಟ್ಟು ಸಂಭ್ರಮಿಸಿದ್ದಾರೆ.
ಅನುಪಮಾ ಗೌಡ ಹೊಸ ಐಷಾರಾಮಿ ಮನೆಯೊಂದನ್ನು ಖರೀದಿಸಿದ್ದಾರೆ. ಅನುಪಮಾ ಗೌಡ ಅವರ ನೂತನ ನಿವಾಸದ ಗೃಹಪ್ರವೇಶ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದೆ. ಹಲವು ವರ್ಷಗಳ ಅವರ ಕನಸು ನನಸಾಗಿದೆ.
ಅನುಪಮಾ ಅವರ ಹೊಸ ಮನೆಯ ಗೃಹಪ್ರವೇಶಕ್ಕೆ ಕಿರುತೆರೆ ನಟ-ನಟಿಯರು ಹಾಜರಿದ್ದರು. ‘ನಮ್ಮನೆ’ಯ ಹೌಸ್ ವಾರ್ಮಿಂಗ್ ಸೆರಮನಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.