ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಲಿವುಡ್ ನಟಿ ಸಮಂತಾ ಅವರು ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು ಎಂದು ಹೇಳಿಕೊಂಡಿದ್ದರು. ಇದೀಗ ದಕ್ಷಿಣ ಭಾರತದ ಮತ್ತೊಂದು ನಟಿ ಕೂಡ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಬಗ್ಗೆ ತಿಳಿಸಿದ್ದಾರೆ.
ʻಬಾಹುಬಲಿʼ ನಟಿ ಅನುಷ್ಕಾ ಶೆಟ್ಟಿ (Anushka Shetty) ಸಂದರ್ಶನವೊಂದರಲ್ಲಿ ತಮ್ಮ ಆರೋಗ್ಯದ (Health) ಬಗ್ಗೆ ಮಾತನಾಡಿದ್ದಾರೆ.
ನಾನು ಒಮ್ಮೆ ನಗುವುದಕ್ಕೆ ಶುರು ಮಾಡಿದರೆ 15 ರಿಂದ 20 ನಿಮಿಷ ನಗುತ್ತಲೇ ಇರ್ತೀನಿ ಎಂದು ಅನುಷ್ಕಾ ಹೇಳಿದ್ದಾರೆ. ಶೂಟಿಂಗ್ ಸೆಟ್‌ನಲ್ಲಿ ಜೋರಾಗಿ ನಗುವುದಕ್ಕೆ ಆರಂಭಿದರೆ ಎಲ್ಲರೂ ತಮ್ಮ ಕೆಲಸಗಳನ್ನು ನಿಲ್ಲಿಸಿ ನನ್ನನ್ನೇ ನೋಡುತ್ತಾ ನಿಂತು ಬಿಡುತ್ತಾರೆ ಎಂದು ನಟಿ ಹೇಳಿದ್ದಾರೆ. ಏನಾದರೂ ಫನ್ನಿ ಘಟನೆ ನೆನಪಿಸಿಕೊಂಡರೆ, ಯಾರಾದರೂ ಜೋಕ್ ಮಾಡಿದರೆ ಕಥೆ ಮುಗೀತು, ನಿರಂತರವಾಗಿ ನಗುತ್ತಲೇ ಇರ್ತೀನಿ ಎಂದಿದ್ದಾರೆ.
ಶೂಟಿಂಗ್ ನಡುವೆ ನಾನು ನಗುವುದಕ್ಕೆ ಆರಂಭಿದರೆ ಕೆಲವರು ತಿಂಡಿ ತಿಂದು ಮುಗಿಸಿದರೂ ನನ್ನ ನಗು ಮಾತ್ರ ನಿಂತಿರುವುದಿಲ್ಲ. ನನಗೆ ಕೂಡಲೇ ನಗುವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಅನುಷ್ಕಾ ಶೆಟ್ಟಿ ಹೇಳಿದ್ದಾರೆ.