ಎರಡನೇ ದಿನವೂ ಮುಂದುವರಿದ ಬಿಬಿಸಿ ಸಂಸ್ಥೆಯ ದೆಹಲಿ, ಮುಂಬೈ ಕಚೇರಿಗಳ ಮೇಲಿನ ಐಟಿ ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ದೆಹಲಿ ಮತ್ತು ಮುಂಬೈ ನಲ್ಲಿರುವ ಬಿಬಿಸಿ ಕಚೇರಿಗಳಲ್ಲಿನ ಐಟಿ ಅಧಿಕಾರಿಗಳ ಶೋಧ ಕಾರ್ಯಾಚರಣೆ ಎರಡನೇ ದಿನಕ್ಕೆ ಮುಂದುವರೆದಿದೆ. ಬುಧವಾರ ಐಟಿ ಅಧಿಕಾರಿಗಳು ಬಿಬಿಸಿ ಕಚೇರಿಯಲ್ಲಿರುವ ಹಣಕಾಸು ದತ್ತಾಂಶದ ಕಾಗದಪತ್ರಗಳ ಇ–ಪ್ರತಿಯನ್ನು ತಯಾರಿಸಿದೆ ಎಂದು ಹೇಳಲಾಗುತ್ತಿದೆ.

ಬಿಬಿಸಿಯಿಂದ ತೆರಿಗೆ ವಂಚನೆ ಆಗಿರುವ ಆರೋಪದ ಹಿನ್ನೆಲೆಯಲ್ಲಿ ಐಟಿ ಇಲಾಖೆ ಈ ಕ್ರಮ ಕೈಗೊಂಡಿರುವುದು ತಿಳಿದುಬಂದಿದೆ. ನಿನ್ನೆ ಬೆಳಗ್ಗೆ 11:30ರ ಸುಮಾರಿಗೆ ನವದೆಹಲಿ ಮತ್ತು ಮುಂಬೈನಲ್ಲಿರುವ ಬಿಬಿಸಿ ಕಚೇರಿಗಳಿಗೆ ಐಟಿ ಅಧಿಕಾರಿಗಳ ತಂಡಗಳು ಹೋಗಿ ಪರಿಶೀಲನೆ ಆರಂಭಿಸಿದ್ದವು. ಆರಂಭದಲ್ಲಿ ಇದು ಐಟಿ ರೇಡ್ ಎಂಬ ಮಾಹಿತಿ ಮಾಧ್ಯಮಗಳಿಗೆ ಬಂದಿತ್ತು. ಆದರೆ ಇದು ರೇಡ್ ಅಲ್ಲ, ಕೇವಲ ಸರ್ವೆ ಮಾತ್ರ ಮಾಡಲಾಗುತ್ತಿದೆ ಎಂದು ಐಟಿ ಇಲಾಖೆ ಸ್ಪಷ್ಟಪಡಿಸಿತು.

2012ರಿಂದ ಇಲ್ಲಿಯವರೆಗೆ ಬಿಬಿಸಿ ಕಚೇರಿಯಲ್ಲಿ ದಾಖಲಾದ ಹಣಕಾಸು ವಿವರವನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಕಚೇರಿಯಲ್ಲಿದ್ದ ಮೊಬೈಲ್​ಗಳ ದತ್ತಾಂಶಗಳನ್ನು ಬೇರೆ ಮೊಬೈಲ್​ಗೆ ನಕಲು ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ತಿಳಿದುಬಂದಿದೆ .

ಬಿಬಿಸಿ ಅಂಗ ಸಂಸ್ಥೆಗಳ ವರ್ಗಾವಣೆ ವೆಚ್ಚ ಮತ್ತು ಅಂತಾರಾಷ್ಟ್ರೀಯ ತೆರಿಗೆ ಪಾವತಿಯಲ್ಲಿ ಅಕ್ರಮಗಳು ನಡೆದಿವೆ ಎಂಬುದು ಆರೋಪ. ಲಂಡನ್ ಮೂಲದ ಬಿಬಿಸಿ ಸಂಸ್ಥೆಗೆ ಈ ಪ್ರಕರಣದಲ್ಲಿ ಹಿಂದೆ ಕೆಲ ಬಾರಿ ನೋಟೀಸ್ ಜಾರಿ ಮಾಡಲಾಗಿತ್ತು. ಆದರೆ ಅದಕ್ಕೆ ಸಂಸ್ಥೆ ಸಹಕರಿಸಿರಲಿಲ್ಲ. ಹೀಗಾಗಿ ಕಚೇರಿಗಳಿಗೆ ಹೋಗಿ ಐಟಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುವ ಕೆಲಸ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!