ಶೂಟಿಂಗ್‌ ನಡುವೆ ಅಸ್ವಸ್ಥರಾದ ನಟಿ ದೀಪಿಕಾ ಪಡುಕೋಣೆ: ಆಸ್ಪತ್ರೆಗೆ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಶೂಟಿಂಗ್‌ ನಡುವೆಯೇ ಅಸ್ವಸ್ಥರಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಪ್ರಾಜೆಕ್ಟ್‌ ಕೆ ಎಂಬ ಸಿನೆಮಾದ ಚಿತ್ರೀಕರಣದಲ್ಲಿ ನಿರತರಾಗಿರುವ ದೀಪಿಕಾ ಪಡುಕೋಣೆ ಇದ್ದಕ್ಕಿದ್ದಂತೆ ಅಸ್ವಸ್ಥರಾಗಿದ್ದಾರೆ. ಅದಾದ ನಂತರ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು .
ಅವರ ಆರೋಗ್ಯ ಸ್ಥಿರವಾಗಿದ್ದು, ಮತ್ತೆ ಶೂಟಿಂಗ್‌ ಸೆಟ್‌ಗೆ ಬಂದಿದ್ದಾರೆ.
ಇಂಡಿಯಾ ಟುಡೇ ವರದಿಯ ಪ್ರಕಾರ, ದೀಪಿಕಾ ಪಡುಕೋಣೆ ಆರೋಗ್ಯದಲ್ಲಿ ತೀವ್ರ ಬಳಲಿಕೆ ಕಂಡುಬಂದಿತ್ತು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ದೀಪಿಕಾ ಅವರ ಎದೆಬಡಿತ ಇದ್ದಕ್ಕಿದ್ದಂತೆ ಏರಿಕೆಯಾಯಿತು. ನಂತರ ತುಂಬಾ ಬಳಲಿಕೆಯಿಂದ ಕಂಡುಬಂದರು. ಅವರೇ ಇದನ್ನು ಗಮನಿಸಿ ತಿಳಿಸಿದರು. ತಕ್ಷಣ ಚಿಕಿತ್ಸೆ ನೀಡಲಾಗಿದ್ದು. ಸೆಟ್‌ಗೆ ವಾಪಸಾಗಿದ್ದಾರೆ ಮತ್ತು ಗುಣಮುಖರಾಗುತ್ತಿದ್ದಾರೆ, ಎಂದು ಎಂದು ವರದಿಯಾಗಿದೆ.
ನಟ ಪ್ರಭಾಸ್‌ ಅವರ ಜೊತೆ ಪ್ರಾಜೆಕ್ಟ್‌ ಕೆ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಸದ್ಯ ಹೈದರಾಬಾದಿನಲ್ಲಿ ಶೂಟಿಂಗ್‌ ನಡೆಯುತ್ತಿದೆ. ಪ್ರಾಜೆಕ್ಟ್‌ ಚಿತ್ರದಲ್ಲಿ ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಮತ್ತು ದಿಶಾ ಪಟಾಣಿ ಕೂಡ ನಟಿಸುತ್ತಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!