ಮೊದಲ ಮಗುವಿಗೆ ಸ್ವಾಗತ ಹೇಳಿದ ನಟಿ ಕವಿತಾ ಗೌಡ- ಚಂದನ್ ದಂಪತಿ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಕನ್ನಡದ ಕಿರುತೆರೆ ನಟಿ ಕವಿತಾ ಗೌಡ ಹಾಗೂ ಚಂದನ್ ಕುಮಾರ್​ ದಂಪತಿ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ.

ಲಕ್ಷ್ಮೀ ಬಾರಮ್ಮ ಸೀರಿಯಲ್ ಮೂಲಕ​ ಖ್ಯಾತಿ ಪಡೆದುರುವ ಈ ಸ್ಟಾರ್​ ಜೋಡಿ ಚೊಚ್ಚಲ ಗಂಡು ಮಗುವಿಗೆ ವೆಲ್​​ಕಮ್​ ಹೇಳಿದ್ದಾರೆ.

ಮುದ್ದು ಕಂದ ಧರೆಗೆ ಆಗಮಿಸಿದ ಎಂದು ಚಂದನ್ ಕುಮಾರ್ ತಮ್ಮ ಇನ್​ಸ್ಟಾದಲ್ಲಿ ವಿಡಿಯೋವೊಂದನ್ನ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಮಗುವಿನ ಬೆಳ್ಳಗಿನ ಕಾಲುಗಳು ಮಾತ್ರ ಕಾಣುತ್ತಿದ್ದು ಚಂದನ್ ಕುಮಾರ್ ಮುಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ. ಸದ್ಯ ತಾಯಿ ಕವಿತಾ ಗೌಡ ಹಾಗೂ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚೆಗಷ್ಟೇ ಕವಿತಾ ಗೌಡ ಅವರ ಸೀಮಂತ ಶಾಸ್ತ್ರ ಸಂಭ್ರಮದಿಂದ ನೆರವೇರಿತ್ತು. ಮೇ 5ರಂದು ಇನ್​ಸ್ಟಾ​ ಖಾತೆಯಲ್ಲಿ ಮುದ್ದಾದ ಫೋಟೋವನ್ನು ಶೇರ್​ ಮಾಡಿಕೊಂಡು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಅಂತ ತಿಳಿಸಿದ್ದರು. ಅದರಂತೆ ಕವಿತಾ ಗೌಡ ಹಾಗೂ ಚಂದನ್ ನಿವಾಸಕ್ಕೆ ಹೊಸದೊಂದು ನಗು ಆಗಮನವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!