ಹೃದಯಾಘಾತದಿಂದ ಉಡಾನ್ ಖ್ಯಾತಿಯ ನಟಿ ಕವಿತಾ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಿರುತೆರೆಯ ಖ್ಯಾತ ನಟಿ, ಕವಿತಾ ಚೌಧರಿ (Kavita Chaudhary) ಹೃದಯಾಘಾತದಿಂದ ನಿಧನರಾಗಿದ್ದಾರೆ. 80-90ರ ದಶಕದಲ್ಲಿ ಕಿವಿತಾ ಡಿಟರ್ಜೆಂಟ್ ಪೌಡರ್ ಜಾಹೀರಾತಿನಲ್ಲಿ ನಟಿಸಿದ್ದರು. ಸರ್ಫ್ ಎಕ್ಸೆಲ್ ಕಂಪೆನಿ ಜಾಹೀರಾತು ಸಾಕಷ್ಟು ಗಮನ ಸೆಳೆದಿತ್ತು.

67ರ ವಯಸ್ಸಿನ ಕವಿತಾ ವಯೋಸಹಜ ಕಾಯಿಲೆಯಿಂದಲೂ ಬಳಲುತ್ತಿದ್ದರು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ, ಹೃದಯಾಘಾತದಿಂದ ಅಮೃತಸರದಲ್ಲಿ ನಿಧನರಾಗಿದ್ದಾರೆ.

ತೊಂಬತ್ತರ ದಶಕದಲ್ಲಿ ಪ್ರಸಾರವಾಗುತ್ತಿದ್ದ ಉಡಾನ್ (Udan) ಧಾರಾವಾಹಿಯಲ್ಲಿ ಕವಿತಾ ಐಪಿಎಸ್ ಅಧಿಕಾರಿಯಾಗಿ ಅಭಿನಯಿಸುತ್ತಿದ್ದರು. ಈ ಪಾತ್ರ ಅವರಿಗೆ ಸಾಕಷ್ಟು ಹೆಸರು ತಂದು ಕೊಟ್ಟಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!