ಹೊಸದಿಗಂತ ಡಿಜಿಟಲ್ ಡೆಸ್ಕ್:
ಡ್ರಗ್ಸ್ ಕೇಸ್ನಲ್ಲಿ ಬಂಧಿತರಾಗಿದ್ದ ನಟಿ ಕ್ರಿಸನ್ ಪಿರೇರಾ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಯುಎಇ ಪೊಲೀಸರು ಪಿರೇರಾರನ್ನು ಬಂಧಿಸಿದ್ದು, ಶಾರ್ಜಾ ಸೆಂಟ್ರಲ್ ಜೈಲಿಗೆ ಕಳುಹಿಸಿದ್ದರು. ಟ್ರೋಫಿ ಒಳಗೆ ಡ್ರಗ್ಸ್ ಸಾಗಿಸುತ್ತಿದ್ದ ಕಾರಣ ಪೊಲೀಸರು ಅವರನ್ನು ಬಂಧಿಸಿದ್ದರು.
ಪಿರೇರಾ ನೆರಮನೆಯ ಆಂಟೋನಿ ಪಾಲ್ ಹಾಗೂ ಬ್ಯಾಂಕ್ ಮ್ಯಾನೇಜರ್ ರಾಜೇಶ್ ಬೂಭಟೆರನ್ನು ಪೊಲೀಸರು ಬಂಧಿಸಿದ್ದರು.
ಪ್ರಾಥಮಿಕ ತನಿಖೆಯಲ್ಲಿ ಕ್ರಿಸನ್ ಹಾಗೂ ಆಂಟೋನಿ ಮುಂಬೈನ ಒಂದೇ ಅಪಾರ್ಟ್ಮೆಂಟ್ ನಿವಾಸಿಗಳು ಎಂದು ತಿಳಿದುಬಂದಿದೆ. ನಾಯಿ ವಿಚಾರಕ್ಕಾಗಿ ಎರಡೂ ಮನೆಯಲ್ಲಿ ಜಗಳವಾಗಿತ್ತು. ದ್ವೇಷಕ್ಕಾಗಿ ಆಂಟೊನಿ ಟ್ರೋಫಿಯೊಳಗೆ ಡ್ರಗ್ಸ್ ಇಟ್ಟಿದ್ದರು ಎನ್ನಲಾಗಿದೆ.